ದೀಪಿಕಾ – ರಣ್‌ವೀರ್ ಮ್ಯಾರೇಜ್ ಡೇಟ್ ಫಿಕ್ಸ್

ಬಾಲಿವುಡ್​ನ ಕ್ಯೂಟ್​, ರೋಮ್ಯಾಂಟಿಕ್ ಜೋಡಿ ಎಂದೇ ಖ್ಯಾತಿ ಪಡೆದ ದೀಪಿಕಾ, ರಣವೀರ್​ ತಮ್ಮ ನಡುವಿದ್ದ ಪ್ರೀತಿಗೆ ಮದುವೆ ಅಂಕಿತ ಹಾಕುವುದಾಗಿ ಕೊನೆಗೂ ಬಹಿರಂಗ ಪಡಿಸಿದ್ದಾರೆ.
ದೀಪಿಕಾ-ರಣವೀರ್​ ಜೋಡಿ ಪ್ರೇಮಿಸುತ್ತಿದ್ದ ವಿಷಯ ಬಾಲಿವುಡ್​ ಅಂಗಳದಲ್ಲಿ ಪಕ್ಕಾವಾಗಿದ್ದು, ಇವರಿಬ್ಬರು ಈ ವಿಷಯದಲ್ಲಿ ಹೆಚ್ಚು ಗಂಭೀರವಾಗಿದ್ದು, ಬದ್ಧತೆಯಿಂದ ಇರುವುದು ಎಲ್ಲರಿಗೂ ತಿಳಿದ ವಿಷಯವಾಗಿತ್ತು. ಆದರೆ ಇವರಿಬ್ಬರ ಮದುವೆ ಯಾವಾಗ ಎಂಬ ಸುದ್ದಿಗೆ ಮಾತ್ರ ಇವರಿಬ್ಬರು ಮಾತು ಮರೆಸುತ್ತಿದ್ದಾರೆ.ಪದ್ಮಾವತ್​ ಚಿತ್ರದ ಯಶಸ್ಸಿನಿಂದಿರುವ ಈ ಜೋಡಿ ಈ ವರ್ಷದಲ್ಲಿ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಅಲ್ಲದೇ ಇದಕ್ಕಾಗಿ ದೀಪಿಕಾ ಕುಟುಂಬದವರೊಂದಿಗೆ ಸಿಲಿಕಾನ್​ ಸಿಟಿಯಲ್ಲಿ ಶಾಂಪಿಂಗ್​ ಕೂಡ ನಡೆಸಿದ್ದರು. ಈಗ ಈ ಸುದ್ದಿಯನ್ನು ಈ ಜೋಡಿಗಳು ಅಧಿಕೃತವಾಗಿ ಒಪ್ಪಿಕೊಂಡಿದ್ದು, ಇದೇ ನವೆಂಬರ್​ 14, 15ರಂದು ನಾವು ಸಪ್ತಪದಿ ತುಳಿಯಲಿದ್ದೇವೆ ಎಂದು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಬಹಿರಂಗ ಪಡಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!