ಇಡೀ ಭಾರತದಾದ್ಯಂತ ಮೀಟು ಹಾವಳಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ. ಬಾಲಿವುಡ್ ನಲ್ಲಿ ನಟೀಮಣಿಯರು ಹಚ್ಚಿದ ಈ ಕಾಡ್ಗಿಚ್ಚು ಎಲ್ಲೆಡೆ ಪಸರಿಸುತ್ತಾ ಸ್ಯಾಂಡಲ್ ವುಡ್ ನಲ್ಲಿ ಕೂಡ ಭಾರಿ ಸದ್ದು ಮಾಡಿದೆ.ದಕ್ಷಿಣ ಭಾರತದ ಖ್ಯಾತ ನಟ ಅಕ್ಷನ್ ಕಿಂಗ್ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಲೈಂಗಿಕ ಕಿರುಕುಳದ ಆರೋಪವನ್ನು ಮಾಡಿದ್ದು, 2 ವರ್ಷಗಳ ಹಿಂದೆ “ವಿಸ್ಮಯ” ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅರ್ಜುನ್ ಸರ್ಜಾ ನನಗೆ ರೆಸಾರ್ಟ್ ಗೆ ಹೋಗೋಣ ಬಾ ಅಂತ ಒತ್ತಾಯ ಮಾಡಿದರು.
ತಬ್ಬಿ ಕೊಳ್ಳುವ ದೃಶ್ಯಗಳು ಇದ್ದಾಗ ಹೀಗೆ ಇನ್ನು ಸ್ವಲ್ಪ ಹೊತ್ತು ಇದ್ದು ಬಿಡೋಣ ಎಂದು ಒತ್ತಾಯ ಮಾಡುತ್ತಿದ್ದರು. ಇದರಿಂದ ಬಹಳಷ್ಟು ಮುಜುಗರವಾಗುತ್ತಿತ್ತು ಎಂದು ಆರೋಪವನ್ನು ಮಾಡಿದ್ದಾರೆ. ಈ ವಿಚಾರವಾಗಿ ಸರ್ಜಾ ಕುಟುಂಬವು ಶೃತಿ ಹರಿಹರನ್ ಹೇಳಿಕೆಗೆ ಪ್ರತಿಕ್ರಿಯೆ ನೀಡುತ್ತಿದೆ.ಜೊತೆಗೆ ಚಿತ್ರದ ನಿರ್ಮಾಪಕರು, ಹಿರಿಯ ನಟರು ಹಾಗೂ ವಾಣಿಜ್ಯ ಮಂಡಳಿಯ ಅಧ್ಯಕ್ಷರು ಸೇರಿದಂತೆ ಹಲವರು ಈ ವಿಚಾರವಾಗಿ ಪ್ರತಿಕ್ರಿಯೆ ನೀಡುತ್ತಿರುವುದು ಎಲ್ಲರಿಗೂ ತಿಳಿದೇ ಇದೆ.
ಈಗ ಶೃತಿ ಹರಿಹರನ್ ಪರ ಯು ಟರ್ನ್ ಚಿತ್ರದ ನಟಿ ಶ್ರದ್ದಾ ಶ್ರೀನಾಥ್ ದನಿ ಎತ್ತಿದ್ದಾರೆ. ನಾನು ಹಾಗೂ ಶೃತಿ ಹರಿಹರನ್ ಒಂದು ಟಾಕ್ ಶೋ ಗೆ ಒಟ್ಟಿಗೆ ಹೋಗಿದ್ದೆವು. ಅಲ್ಲಿ ಕಾಸ್ಟಿಂಗ್ ಕೌಚ್ ಟಾಪಿಕ್ ಬಂತು, ಶೋ ನಲ್ಲಿ ಶೃತಿ ಯಾರ ಹೆಸರು ಹೇಳಲಿಲ್ಲ. ಕ್ಯಾಮೆರಾ ಆಫ್ ಆದ ಮೇಲೆ ಎಲ್ಲಾ ಶೃತಿ ಹರಿಹರನ್ ಹೇಳಿದ್ದರು, ನನಗೂ ಬಹಳ ಬೇಸರವಾಯಿತು ಒಂದು ಹೆಣ್ಣಿನ ಮೇಲೆ ಈ ರೀತಿ ಒತ್ತಡ ಹೇರುವುದು ಎಷ್ಟು ಸರಿ ಎಂದು ನಟಿ ಶ್ರದ್ದಾ ಶ್ರೀನಾಥ್ ಟ್ವೀಟ್ ಮಾಡುವ ಮೂಲಕ ಹೇಳಿಕೊಂಡಿದ್ದಾರೆ.
ಈಗ ಮತ್ತೊಬ್ಬ ಪ್ರಬುದ್ಧ ನಟ ಪ್ರಕಾಶ್ ರೈ ಕೂಡ ಶ್ರುತಿ ಹರಿಹರನ್ ಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ನಟ ಅರ್ಜುನ್ ಸರ್ಜಾ ಕೂಡ ಜೆಂಟಲ್ ಮ್ಯಾನ್ ಹಾಗೆ ನಟಿ ಶ್ರುತಿ ಹರಿಹರನ್ ಕೂಡ ಉತ್ತಮ ಕಲಾವಿದೆ. ನಾನು ಹೆಣ್ಣು ಮಕ್ಕಳಿಗೆ ತೊಂದರೆ ಕೊಡುವುದನ್ನು ಒಪ್ಪುವುದಿಲ್ಲ. ಹಾಗೊಂದು ವೇಳೆ ಏನಾದರೂ ನಡೆದಿದ್ದರೆ ಸರ್ಜಾ ಕ್ಷಮೆ ಕೇಳಿ ದೊಡ್ಡವರಾಗುವುದು ಉತ್ತಮ ಎಂದು ಹೇಳಿದ್ದಾರಂತೆ.ಇದರಿಂದ ಮತ್ತೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ ಎನ್ನಬಹುದು. ಮೀಟು ಅಭಿಯಾನ ದೊಡ್ಡ ರೀತಿಯ ಸಂಚಲವನ್ನು ಮೂಡಿಸುವುದು ಗ್ಯಾರೆಂಟಿ ಅನಿಸುತ್ತದೆ.
Pingback: DevOps consulting company