Ranahaddu: ರಣಹದ್ದು ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಹೊಸಬರೇ ನಟಿಸಿರುವ ‘ರಣಹದ್ದು’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ನ್ನು ನಟಿ ಪ್ರಿಯಾ ಹಾಸನ್ ಬಿಡುಗಡೆ ಮಾಡಿದ್ದಾರೆ.

‘ರಣಹದ್ದು’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಫಸ್ಟ್ ಲುಕ್ ಇದೀಗ ಬಿಡುಗಡೆ ಆಗಿದೆ. ತಮಿಳು ನಿರ್ದೇಶಕ ಮಾಣಿಕ್ಯ ಜೈ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮಾಣಿಕ್ಯ ನಿರ್ದೇಶನ ಮಾಡುವ ಜೊತೆಗೆ ‘ರಣಹದ್ದು’ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ತಮಿಳಿನಲ್ಲಿ ಎರಡು ಸಿನಿಮಾಗಳನ್ನು ಮಾಣಿಕ್ಯ ಜೈ ನಿರ್ದೇಶನ ಮಾಡಿದ್ದಾರೆ. ‘ರಣಹದ್ದು’ ಅವರ ಮೊದಲ ಕನ್ನಡ ಸಿನಿಮಾ ಆಗಿದೆ.

‘ರಣಹದ್ದು’ ಆಧುನಿಕ ತಂತ್ರಜ್ಞಾನ ಅದರಲ್ಲಿಯೂ ಮೊಬೈಲ್ ಫೋನ್ ನಿಂದ ಆಗುತ್ತಿರುವ ಮೋಸ, ವಂಚನೆ ಕುರಿತಾಗಿ ಕತೆಯುಳ್ಳ ಸಿನಿಮಾ ಆಗಿದೆ. ದಿನನಿತ್ಯವೂ ಸಮಾಜದಲ್ಲಿ ನಡೆಯುತ್ತಿರುವ ನಿಜ ಘಟನೆಗಳನ್ನೇ ಆಧರಿಸಿ ಈ ಸಿನಿಮಾದ ಕತೆ ಹೆಣೆಯಲಾಗಿದೆ. ಸಸ್ಪೆನ್ಸ್-ಆಕ್ಷನ್- ಥ್ರಿಲ್ಲರ್ ಅಂಶಗಳನ್ನು ಸಿನಿಮಾ ಒಳಗೊಂಡಿದೆ.

ಈ’ ಸಿನಿಮಾದಲ್ಲಿ ಮಾಣಿಕ್ಯ ಜೈ ಜೊತೆಗೆ ರಂಜಿತ್, ಯತೀಶ್, ನಾಯಕಿಯಾಗಿ ಸೌಮ್ಯ ನಟಿಸಿದ್ದಾರೆ. ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದೆ. ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

ಸರಸ್ವತಿ ಹಾಗೂ ಮಾಣಿಕ್ಯ ಜೈ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದಾರೆ. ತಾಜ್ ಹಿನ್ನೆಲೆ ಸಂಗೀತ, ಜೀವನ್ ಸಿನಿಮಾಟೊಗ್ರಫರ್ ಕಾರ್ಯ ಮಾಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!