ತುಪ್ಪದ ಹುಡುಗಿ ರಾಗಿಣಿ ಟೆರರಿಸ್ಟ್ ಅವತಾರವೆತ್ತಿದ್ದು ಶುಕ್ರವಾರ ರಾಜ್ಯಾದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಭೇಟಿಯಾಗಲು ಬರುತ್ತಿದ್ದಾಳೆ. ಈ ವಿಷಯವನ್ನು ತಿಳಿಸಲೆಂದೇ ಚಿತ್ರತಂಡವು ಪತ್ರಿಕಾಗೋಷ್ಠಿಯನ್ನು ಹಸಿರುಮನೆಯಲ್ಲಿ ಹಮ್ಮಿಕೊಂಡಿತ್ತು. ನಿರ್ದೇಶಕ ಪಿ.ಸಿ.ಶೇಖರ್ ಮಾತನಾಡಿ, ದೇಶದ ದೊಡ್ಡ ಪಿಡುಗಾಗಿರುವ ಭಯೋತ್ಪಾದನೆಯ ಬಗ್ಗೆ ಒಂದೇ ಚಿತ್ರದಲ್ಲಿ ಹೇಳಲು ಸಾಧ್ಯವಿಲ್ಲ, ಆದರೆ ಭಯೋತ್ಪಾದನೆಯನ್ನು ದೂರ ಮಾಡಬೇಕೆಂಬ ಉದ್ದೇಶದಿಂದ ಈ ಚಿತ್ರವನ್ನು ನಿರ್ದೇಶಿಸಿದ್ದು, ಇದರಲ್ಲಿ 2009ರಲ್ಲಿ ಬೆಂಗಳೂರಿನಲ್ಲಿ ನಡೆದ ಬಾಂಬ್ ಸ್ಫೋಟದ ಬಗ್ಗೆ ಚಿತ್ರದಲ್ಲಿ ಹೇಳಲು ಹೊರಟಿದ್ದೇವೆ, ಕೆ.ಆರ್. ಮಾರ್ಕೆಟ್, ಮೆಟ್ರೋ ನಿಲ್ದಾಣಗಳಲ್ಲಿ ಹಿಡನ್ ಕ್ಯಾಮರಾಗಳನ್ನು ಇಟ್ಟು ಶೂಟ್ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಯಾವುದೇ ಕಟ್ ಮಾಡದೆ ಯುಎ ನೀಡಿ ದ್ದಾರೆ. ಈ ಚಿತ್ರದ ಆರಂಭದಿಂದಲೂ ನಾಯಕನಟಿ ರಾಗಿಣಿ ಅವರು ತುಂಬಾ ಸಹಕಾರ ನೀಡಿದರು. ನಮ್ಮ ಚಿತ್ರದ ಅಂಶಗಳಲ್ಲಿ ಗಟ್ಟಿತನ ಇರುವುದರಿಂದ ದೊಡ್ಡ ಸಿನಿಮಾದ ಮುಂದೆ ಬರಲು ಸಿದ್ದರಿದ್ದೇವೆ. ಅಲ್ಲದೆ ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿರುವುದು ಚಿತ್ರಕ್ಕೆ ಯಾವುದೇ ತೊಂದರೆ ಎದುರಾಗಲಾರದು ಎಂಬ ನಂಬಿಕೆ ವ್ಯಕ್ತಪಡಿಸಿದರು.
ನಟಿ ರಾಗಿಣಿ ಮಾತನಾಡಿ, ನಾನು ಚಿತ್ರರಂಗಕ್ಕೆ ಬಂದು 10 ವರ್ಷಗಳಾಗಿದೆ ಇದುವರೆಗೂ ಅನೇಕ ಪಾತ್ರಗಳಲ್ಲಿ ನಟಿಸಿದ್ದೇನೆ, ಆದರೆ ಈ ಚಿತ್ರದ ಗೆಟಪ್ ತುಂಬಾ ಡಿಫರೆಂಟಾಗಿದೆ. ರೇಶ್ಮಾ ಎಂಬ ಹೆಸರಿನಲ್ಲಿ ಇಡೀ ಕುಟುಂಬವನ್ನು ನಿಭಾಯಿಸುತ್ತಾ, ಮತ್ತೊಂದು ಕಡೆ ಪ್ರೀತಿಯ ಸಂದರ್ಭವನ್ನು ಎದುರಿಸುತ್ತೇನೆ, ಚಿತ್ರದಲ್ಲಿ ಭಾವನೆಗಳಿಗೆ ಹೆಚ್ಚು ಪ್ರಾಶಸ್ತ್ಯವಿದ್ದು ಈ ಚಿತ್ರದಲ್ಲಿ ಭರ್ಜರಿ ಫೈಟ್ ಮಾಡಿದ್ದೇನೆ, ಈ ಚಿತ್ರದಲ್ಲಿ ಟೈಟರಿಸ್ಟ್ ಎಂಬ ತೀರ್ಮಾನವನ್ನು ಪ್ರೇಕ್ಷಕರಿಗೆ ಬಿಟ್ಟಿದ್ದೇವೆ ಎಂದರು.
Be the first to comment