ಮೊದಲ ಮಳೆಯನ್ನು ಸಾಕಷ್ಟು ಶ್ರದ್ಧೆಯಿಂದ ಮಾಡಿದ್ದೇವೆ. ನಾನೊಬ್ಬ ಹೀರೋ ಎನ್ನುವುದಕ್ಕಿಂತ ಆರ್ಟಿಸ್ಟ್ ಆಗಲು ಇಷ್ಟ ಪಡುತ್ತೇನೆ ಎಂದು ನಿರ್ಮಾಪಕ ಮತ್ತು ನಟ ರಾಜಾನರಸಿಂಹ ಅವರು ‘ಬಿಸಿನಿಮಾಸ್’ತಂಡದೊಂದಿಗೆ ಮಾತಾಡಿದ್ದಾರೆ.
ಇದೊಂದು ಆನಂದದ ಮಳೆ. ವೀಕ್ಷಕರಿಗೆ ಚಿತ್ರದಲ್ಲಿ ಏನು ಬೇಕು ಅದೆಲ್ಲವನ್ನು ಪ್ಯಾಕೇಜ್ ರೀತಿಯಲ್ಲಿ ನೀಡಿದ್ದೇವೆ. ಚಿತ್ರದಲ್ಲಿ 9 ನಾಯಕಿಯರು ಯಾಕೆ ಇದ್ದಾರೆ ಎನ್ನುವುದನ್ನು ನೀವು ಚಿತ್ರ ನೋಡಿ ತಿಳಿಯಬೇಕು. ಎಲ್ಲ ನಾಯಕಿಯರು ಉತ್ತಮವಾಗಿ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ನಿರ್ದೇಶಕ ರಾಜಶರಣ್ ಹಿಂದೆ ‘ಎಮ್ಮೆತಿಮ್ಮ’ ಎಂಬ ಕಿರು ಚಿತ್ರ ಮಾಡಿದ್ರು ಇದು ಅವರ ಎರಡನೇ ಚಿತ್ರ ರಾಜಾನರಸಿಂಹ ನನಗೆ 5 ವರ್ಷದ ಸ್ನೇಹಿತರು, ಅವರಿಗಾಗಿಯೇ ಒಂದು ಕಥೆ ಮಾಡಿದೆ, ಆ ಚಿತ್ರ ಆಗಲಿಲ್ಲ, ಇವರುಗೇನು 10 ಜನ ಹೀರೋಯಿನ್ ಇಟ್ಕೊಂಡು ಸಿನಿಮಾ ಮಾಡಕ್ಕಾಗುತ್ತಾ ಎನ್ನುವ ಮಾತು ಬಂತು. ಯಾಕಾಗಲ್ಲ ಅಂತ ಚಾಲೆಂಜ್ ತಗೊಂಡು ಈ ಚಿತ್ರ ಮಾಡಿದ್ದೇನೆ, ವ್ಯಕ್ತಿಯ ಜೀವನದಲ್ಲಿ ಮದುವೆ ಎನ್ನುವುದು ಮೊದಲಮಳೆ ಇದ್ದಹಾಗೆ, ನಾಯಕನ ಲೈಫ್ ನಲ್ಲೂ ಮೊದಲಮಳೆ ಆಗುತ್ತಾ ಇಲ್ವಾ ಅನ್ನೋದೇ ಈ ಚಿತ್ರ ಎಂದರು.
ಮಡಿಕೇರಿ, ಸಕಲೇಶಪುರ, ಮೈಸೂರು, ಬೆಂಗಳೂರು ಸುತ್ತಮುತ್ತ 40 ದಿನ ಚಿತ್ರೀಕರಣ ನಡೆಸಿದ್ದೇವೆ. ಹಾರರ್ ಕಂಟೆಂಟ್ ಇರುವ ಕಾರಣ ಚಿತ್ರಕ್ಕೆ ಯು/ಎ ಸಿಕ್ಕಿದೆ ಎಂದು ಹೇಳಿದರು. ಉಳಿದಂತೆ ನಟ ಗಣೇಶರಾವ್, ಜೋತಿ ಮರೂರು,
ನಾಯಕಿಯರು : ಸಾಹಿತ್ಯ ಪ್ರಕಾಶ್, ಪೂಜಾ ರಾಮಚಂದ್ರ, ಅಂಜಲಿ, ಉಷಾ, ಮತ್ತು ಪ್ರಿಯಾ ಶೆಟ್ಟಿ, ಹೀಗೆ ಒಂಭತ್ತು ಜನ ನಾಯಕಿರಿದ್ದಾರೆ.
ಮೊದಲೇ ಮಳೆ ಚಿತ್ರ ಜೂನ್ 23ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಕ್ಕೆ ಬರಲಿದೆ. ಚಿತ್ರವನ್ನು ಜಾಕ್ ಮಂಜು ವಿತರಣೆ ಮಾಡುತ್ತಿದ್ದಾರೆ.
Be the first to comment