ಸ್ಟಾರ್ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಮತ್ತು ಬಾಲಿವುಡ್ ನಟಿ ಸಾರಾ ಅಲಿ ಖಾನ್ ನಡುವೆ ಸಂಬಂಧ ಹಳಸಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಶುಭ್ಮನ್ ಗಿಲ್, ಸಾರಾ ಅಲಿ ಖಾನ್ ಇಬ್ಬರೂ ಡೇಟಿಂಗ್ ಮಾಡುತ್ತಿದ್ದರು ಎಂಬ ವದಂತಿ ಹಲವು ದಿನಗಳಿಂದ ಹಬ್ಬಿದ್ದವು. ಸಾರಾ ಅಲಿ ಖಾನ್ ಮತ್ತು ಶುಭ್ಮನ್ ಗಿಲ್ ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಒಪ್ಪಿಕೊಂಡಿಲ್ಲ. ಆದರೆ ಅವರು ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ವಿಮಾನದಲ್ಲಿ ಒಟ್ಟಿಗೆ ಪ್ರಯಾಣಿಸುತ್ತಿದ್ದರು.
ವರದಿಗಳ ಪ್ರಕಾರ, ಸಾರಾ ಅಲಿ ಖಾನ್ ಮತ್ತು ಶುಭ್ಮನ್ ಗಿಲ್ ಸಾಮಾಜಿಕ ಮಾಧ್ಯಮದಲ್ಲಿ ಪರಸ್ಪರ ಅನ್ ಫಾಲೋ ಮಾಡಿದ್ದಾರೆ. ಅಭಿಮಾನಿಗಳ ಹದ್ದಿನ ಕಣ್ಣಿಗೆ ಈ ವಿಚಾರ ಕಂಡು ಬಂದಿದೆ. ಇಬ್ಬರೂ ಇನ್ಸ್ಟಾಗ್ರಾಮ್ನಲ್ಲಿ ಪರಸ್ಪರ ಅನ್ಫಾಲೋ ಮಾಡಿದ್ದಾರೆ. ಇದು ಅವರಿಬ್ಬರ ಸಂಬಂಧದಲ್ಲಿ ಒಡಕು ಮೂಡಿದೆ ಎನ್ನುವ ಅನುಮಾನಕ್ಕೆ ಕಾರಣವಾಗಿದೆ.
ಶುಭ್ಮನ್ ಗಿಲ್ ಈ ಹಿಂದೆ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಹೇಳಲಾಗಿತ್ತು. ಶುಭ್ಮನ್ ಗಿಲ್ ಅವರನ್ನು ಸಾರಾ ಅಲಿ ಖಾನ್ಗಾಗಿ ತೊರೆದರು ಎಂದು ಸುದ್ದಿಯಾಗಿತ್ತು.
Be the first to comment