Jersey no. 10: ಈ ವಾರ “ಜರ್ಸಿ ನಂಬರ್ 10” ತೆರೆಗೆ

ಯುವನಟ ಆದ್ಯಾ ತಿಮ್ಮಯ್ಯ ನಾಯಕ, ನಿರ್ದೇಶಕನಾಗಿ ಕೆಲಸ ಮಾಡಿರುವ “ಜರ್ಸಿ ನಂಬರ್10” ಚಿತ್ರ ಮೇ19ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಿರ್ದೇಶಕ ಆದ್ಯಾ ತಿಮ್ಮಯ್ಯ ಅವರು, ನನ್ನ ತಾಯಿ ಮತ್ತು ನಾನು ಸೇರಿ ಈ ಕಥೆಯನ್ನು ಬರೆದಿದ್ದೇವೆ. ಇದರಲ್ಲಿ ಕ್ರೀಡೆಯ ಜೊತೆಗೆ ಮೂರು ಲವ್ ಸ್ಟೋರಿಗಳೂ ಇವೆ ಎಂದು ತಿಳಿಸಿದ್ದಾರೆ.

ಹಿರಿಯ ನಟ ದತ್ತಣ್ಣ ಚಿತ್ರದಲ್ಲಿ ನಾಯಕನ ತಾತನ ಪಾತ್ರ ಮಾಡಿದ್ದಾರೆ. ಚಿತ್ರದಲ್ಲಿ ಕೊಡಗಿನ ಸೌಂದರ್ಯವನ್ನು ಅದ್ಬುತವಾಗಿ ತೋರಿಸುವ ಯತ್ನ ನಡೆದಿದೆ. ಥ್ರಿಲ್ಲರ್ ಮಂಜು ಅವರ ಸಾಹಸಗಳು ಚಿತ್ರಕ್ಕಿವೆ.

ಯಂಗ್‍ಸ್ಟರ್ಸ್‍ಗೆ ಮೋಟಿವೇಶನ್ ಆಗುವ ಕಥೆಯಿದೆ. ಕೊಡಗು ಎಂದರೆ ಹಾಕಿ, ಕೊಡಗಿಗೂ ಹಾಕಿಗೂ ಅವಿನಾಭಾವ ಸಂಬಂಧವಿದೆ. ಅದನ್ನು ಈ ಚಿತ್ರದಲ್ಲಿ ಚೆನ್ನಾಗಿಯೇ ತೋರಿಸಿದ್ದಾರೆ. ನನ್ನ ಜೊತೆ ಮಂಡ್ಯ ರಮೇಶ್, ಟೆನ್ನಿಸ್ ಕೃಷ್ಣ ಕೂಡ ನಟಿಸಿದ್ದಾರೆ ಎಂದು ದತ್ತಣ್ಣ ಹೇಳಿದ್ದಾರೆ.

ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ನಾಯಕನ ಹಾಕಿ ತರಬೇತುದಾರನಾಗಿ ಕಾಣಿಸಿಕೊಂಡಿದ್ದಾರೆ.

ಮೂಲತಃ ನಾನು ಕ್ರಿಕೆಟ್ ಪ್ಲೇಯರ್. ಹೊಸತನ ಇರುತ್ತೆ ಅಂತ ಈ ಪಾತ್ರ ಮಾಡಿದ್ದು. ಕಥೆಗೆ ತಕ್ಕಂತೆ ನಾಲ್ಕು ಫೈಟ್‍ಗಳನ್ನು ಕಂಪೋಸ್‌ ಮಾಡಿದ್ದೇನೆ. ಈ ಚಿತ್ರದಲ್ಲಿ ಸುಂದರ ಲೋಕೇಷನ್‍ ಗಳು ಹೈಲೈಟ್ ಆಗಿವೆ ಎಂದು ಥ್ರಿಲ್ಲರ್ ಮಂಜು ತಿಳಿಸಿದ್ದಾರೆ.

ಚಿತ್ರಕ್ಕೆ ಸೆನ್ಸಾರ್‌ ಬೋರ್ಡ್‌ ಯು/ಎ ಪ್ರಮಾಪತ್ರ ನೀಡಿದೆ.
—–

Be the first to comment

Leave a Reply

Your email address will not be published. Required fields are marked *

Translate »
error: Content is protected !!