The kerala story: ವಿವಾದ ಸೃಷ್ಟಿಸಿದ ‘ದಿ ಕೇರಳ ಸ್ಟೋರಿ’ ಟ್ರೈಲರ್

ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರ ಆಗಲ್ಲಎನ್ನುವ ಸಂಭಾಷಣೆ ಇರುವ ಮಲಯಾಳಂನ ‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೈಲರ್ ವಿವಾದ ಸೃಷ್ಟಿಸಿದೆ.

ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಆಕೆ ಐಸಿಸ್‌ ಉಗ್ರ ಸಂಘಟನೆಯನ್ನು ಸೇರುವ ಕಥೆಯನ್ನು ದಿ ಕೇರಳ ಸ್ಟೋರಿ ಸಿನಿಮಾ ಒಳಗೊಂಡಿದೆ. ಬಿಡುಗಡೆಯಾಗಿರುವ ಟ್ರೈಲರ್ ದೊಡ್ಡ ಮಟ್ಟದ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

ಸಿನಿಮಾದ ಟ್ರೈಲರ್ ನಲ್ಲಿ ಮುಸ್ಲಿಂ ಹುಡುಗಿಯೊಬ್ಬಳು ಹಿಂದೂ ಹುಡುಗಿಯ ಜೊತೆ ಆಡುವ ಮಾತು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ. ಇಲ್ಲಿ ಅಲ್ಲಾಹ್ ಬಗ್ಗೆ ವೈಭವೀಕರಣ ಮಾಡಿ ಹಿಂದೂ ದೇವರನ್ನು ತುಚ್ಛವಾಗಿ ಕಾಣಲಾಗಿದೆ ಎಂದು ಹೇಳಲಾಗುತ್ತಿದೆ.

ಕೇರಳದ ಹಿಂದೂ ಹುಡುಗಿಯಾದ ಶಾಲಿನಿ ಉನ್ನೀಕೃಷ್ಣ ಶಿವನ ಅಪಾರ ಭಕ್ತೆ. ಅವಳು ಶಿಕ್ಷಣಕ್ಕಾಗಿ ಹಾಸ್ಟೇಲ್ ಸೇರಿಕೊಳ್ಳುತ್ತಾಳೆ. ಅಲ್ಲಿ ಮುಸ್ಲಿಂ ಹುಡುಗಿಯೊಬ್ಬಳ ಪರಿಚಯವಾಗುತ್ತದೆ. ನಂತರ ಶಾಲಿನಿಗೆ ಸಾರ್ವಜನಿಕವಾಗಿಯೇ ಲೈಂಗಿಕ ಕಿರುಕುಳ ನೀಡಲಾಗುತ್ತದೆ.

ಈ ಸಂದರ್ಭದಲ್ಲಿ ಮುಸ್ಲಿಂ ಹುಡುಗಿಯ ಬಾಯಿಯಲ್ಲಿ ‘ಹಿಜಾಬ್ ಹಾಕಿದವರ ಮೇಲೆ ಅತ್ಯಾಚಾರವಾಗಲ್ಲ, ಯಾಕೆಂದರೆ ಅಲ್ಲಾಹ್ ನಮ್ಮನ್ನು ಕಾಯುತ್ತಿರುತ್ತಾನೆ’ ಎಂದು ಡೈಲಾಗ್ ಹೇಳಿಸಿದ್ದಾರೆ. ಈ ಮಾತು ಹಿಂದೂ ಹುಡುಗಿಯ ಮೇಲೆ ಪರಿಣಾಮ ಬೀರಿ, ಮತಾಂತರವಾಗುತ್ತಾಳೆ. ಇಷ್ಟೇ ಅಲ್ಲದೇ, ಮತಾಂತರಗೊಂಡ ಆ ಹುಡುಗಿ ಉಗ್ರ ಸಂಘಟನೆ ಸೇರುವ ಅಂಶ ಟ್ರೈಲರ್ ನಲ್ಲಿ ಇದೆ,

ರಿಲೀಸ್ ಆಗಿರುವ ಟ್ರೈಲರ್ ಗೆ ಭಾರೀ ವಿರೋಧ ವ್ಯಕ್ತವಾಗಿದೆ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಮಾತುಗಳು ಸಹ ಕೇಳಿ ಬರುತ್ತಿವೆ.

ಈ ಚಿತ್ರ ಮೇ 5ಕ್ಕೆ ಬಿಡುಗಡೆ ಆಗಲಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!