Reeshma Nanaiah: ಕೆಡಿ ಸಿನಿಮಾದ ನಾಯಕಿ ಇವರು?

ಕೆಡಿ ಸಿನಿಮಾದಲ್ಲಿ ಧ್ರುವ ಸರ್ಜಾನಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ರೀಷ್ಮಾ ನಾಣಯ್ಯ ಸಿನಿಮಾ ಶೂಟಿಂಗ್ ನಲ್ಲಿಯೂ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡವು ಅಧಿಕೃತವಾಗಿ ಘೋಷಿಸಲು ಸಜ್ಜಾಗಿದೆ. ಏ.28ಕ್ಕೆ ಶುಕ್ರವಾರ 10:05ಕ್ಕೆ ಫಸ್ಟ್ ಲುಕ್ ಸಹಿತವಾಗಿ ‘ಕೆಡಿ’ ನಾಯಕಿ ಮಚ್ಚ್‌ಲಕ್ಷ್ಮಿಯನ್ನು ಸಿನಿ ಪ್ರಿಯರ ಮುಂದೆ ರಿವೀಲ್ ಮಾಡಲು ಮುಂದಾಗಿದೆ.

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೆಡಿ ಸಿನಿಮಾ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಕೆವಿಎನ್‌ ಪ್ರೊಡಕ್ಷನ್‌ ನಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾಕ್ಕೆ ಜೋಗಿ ಪ್ರೇಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಈ ಸಿನಿಮಾದಲ್ಲಿ ಖ್ಯಾತ ನಟ ಸಂಜಯ್ ದತ್ತ್ ಅಲ್ಲದೇ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ರವಿಚಂದ್ರನ್ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

1970ರಲ್ಲಿ ನಡೆದ ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಸಿನಿಮಾ ಮಾಡಲಾಗುತ್ತಿದೆ. 70ರ ದಶಕದ ರೌಡಿಸಂ ಕಥೆಯನ್ನು ಸಿನಿಮಾ ಮೂಲಕ ತೆರೆ ಮೇಲೆ ತರುವ ಪ್ರಯತ್ನ ನಡೆದಿದೆ.
ಈಗಾಗಲೇ ಸಿನಿಮಾದ ಚಿತ್ರೀಕರಣವು ಭರದಿಂದ ಸಾಗುತ್ತಿದ್ದು, ಬೆಂಗಳೂರಿನ ಸುಂಕದಕಟ್ಟೆಯಲ್ಲಿ 20 ಎಕರೆ ಜಾಗದಲ್ಲಿ ಸೆಟ್‌ ಹಾಕಲಾಗಿದೆ. ಮೈಸೂರು ಲ್ಯಾಂಫ್ಸ್‌ ಒಳಗಡೆ, ಹೈದರಾಬಾದ್‌, ಮುಂಬೈನ ಕೆಲ ಸ್ಟುಡಿಯೋಗಳಲ್ಲಿ ಕೆಡಿ ಸಿನಿಮಾ ಚಿತ್ರೀಕರಣಕ್ಕೆ ಸೆಟ್‌ ಸಜ್ಜಾಗಿವೆ.

ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ‘ಕೆಡಿ’ ಸಿನಿಮಾ ಬಿಡುಗಡೆ ಆಗಲಿದೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!