Mafia “ಮಾಫಿಯಾ” ಜೂನ್ ನಲ್ಲಿ ತೆರೆಗೆ

ಪ್ರಜ್ವಲ್ ದೇವರಾಜ್ ನಾಯಕರಾಗಿ ನಟಿಸಿರುವ ಮಾಫಿಯಾ ಚಿತ್ರ ಜೂನ್ ನಲ್ಲಿ ತೆರೆಗೆ ಬರಲಿದೆ.

“ಮಾಫಿಯಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು, ಮೈಸೂರು ಹಾಗೂ ಹೈದರಾಬಾದ್ ನಲ್ಲಿ ಅರವತ್ತು ದಿನಗಳ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಂತರದ ಪೋಸ್ಟ್ ಪ್ರೊಡಕ್ಷನ್ ಚಟುವಟಿಕೆಗಳು ಬಿರುಸಿನಿಂದ ಸಾಗಿದ್ದು, ಜೂನ್ ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ಧತೆ ನಡೆಸಿದೆ.

ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರ ಅಪಾರವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗುತ್ತಿದೆ. ಆಕ್ಷನ್ ಪ್ರಿಯರಿಗೆ ಈ ಚಿತ್ರ ಮೆಚ್ಚುಗೆಯಾಗಲಿದೆ ಎಂದು ಚಿತ್ರ ತಂಡ ಭರವಸೆ ಹೊಂದಿದೆ.

“ಮಾಫಿಯಾ” ಚಿತ್ರಕ್ಕಾಗಿ ಪ್ರಜ್ವಲ್ ಅವರು ವಿಭಿನ್ನ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ‌. ಇದು ಅವರ ನಟನೆಯ ಮೂವತ್ತೈದನೇ ಚಿತ್ರ ಆಗಿದೆ.

ಈ ಚಿತ್ರದಲ್ಲಿ ಐದು ಸಾಹಸ ಸನ್ನಿವೇಶಗಳಿದೆ‌. ವಿನೋದ್, ರಿಯಲ್ ಸತೀಶ್, ಡಿಫರೆಂಟ್ ಡ್ಯಾನಿ ಹಾಗೂ ಜಾಲಿ ಬಾಸ್ಟಿನ್ ಅವರು ಸಾಹಸ ನಿರ್ದೇಶನ ಮಾಡಿದ್ದಾರೆ.

ಕ್ಲೈಮ್ಯಾಕ್ಸ್ ಭಾಗದ ಸಾಹಸ ಸನ್ನಿವೇಶದ ಚಿತ್ರೀಕರಣ ಹತ್ತು ದಿನಗಳ ಕಾಲ ನಡೆದಿದೆ. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡುತ್ತಿರುವ ಇಡೀ ತಂಡಕ್ಕೆ ನಿರ್ಮಾಪಕ ಕುಮಾರ್ ಬಿ. ಧನ್ಯವಾದ ಹೇಳಿದ್ದಾರೆ.

ಲೋಹಿತ್ ಹೆಚ್ ನಿರ್ದೇಶನದ ಈ ಚಿತ್ರದಲ್ಲಿ ಮೂರು ಹಾಡುಗಳಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ.

ಎಸ್ ಪಾಂಡಿಕುಮಾರ್ ಛಾಯಾಗ್ರಹಣವಿರುವ ಈ ಚಿತ್ರದ ತಾರಾಬಳಗದಲ್ಲಿ ಪ್ರಜ್ವಲ್ ದೇವರಾಜ್, ಅದಿತಿ ಪ್ರಭುದೇವ, ದೇವರಾಜ್ , ಸಾಧುಕೋಕಿಲ, ಶೈನ್ ಶೆಟ್ಟಿ, ವಿಜಯ್ ಚೆಂಡೂರ್, ವಾಸುಕಿ ವೈಭವ್ ಮುಂತಾದವರಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!