ರಾಘವೇಂದ್ರ ರಾಜ್ ಕುಮಾರ್ ಕಿರಿಯ ಪುತ್ರ ಯುವರಾಜ್ ನಾಯಕನಾಗಿ ನಟಿಸುವ ಚಿತ್ರದ ಮುಹೂರ್ತ ನಾಳೆ ನಡೆಯಲಿದೆ.
ಮಾರ್ಚ್ 3 ನೇ ತಾರೀಖು ದೊಡ್ಮನೆ ಮಂದಿಯ ಸಮ್ಮುಖದಲ್ಲಿ ಅಶೋಕ ಹೋಟೆಲ್ ನಲ್ಲಿ ಸಿಂಪಲ್ ಆಗಿ ಯುವ ಅಭಿನಯದ ಮೊದಲ ಚಿತ್ರ ಗ್ರ್ಯಾಂಡ್ ಆಗಿ ಸೆಟ್ಟೇರಲಿದೆ.
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಚಿತ್ರ ಮೂಡಿ ಬರಲಿದೆ. ಮುಹೂರ್ತ ದಿನ ಚಿತ್ರದ ಟೈಟಲ್ ಟೀಸರ್ ನ್ನು ಲಾಂಚ್ ಮಾಡಿ ದೊಡ್ಮನೆ ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಸಂತೋಷ್ ಆನಂದ್ ರಾಮ್ ಪ್ಲಾನ್ ಮಾಡಿಕೊಂಡಿದ್ದಾರೆ.
ಈಗಾಗಲೇ ಮಿನರ್ವ ಮಿಲ್ ನಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಟೈಟಲ್ ಟೀಸರ್ ಶೂಟ್ ಮಾಡಿರುವ ಸಂತೋಷ್ ಆನಂದ್ ರಾಮ್, ಮಾರ್ಚ್ ಮೂರನೇ ತಾರೀಖು ಚಿತ್ರದ ಮುಹೂರ್ತ ಮುಗಿಸಿ, ನಂತರ ಟೀಸರ್ ನ್ನು ಅಭಿಮಾನಿಗಳಿಗೆ ಅರ್ಪಿಸಲಿದ್ದಾರೆ.
ಯುವ ಮೊದಲ ಚಿತ್ರಕ್ಕೆ ಶಿವಣ್ಣ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ಕೊಡಲಿದ್ದಾರೆ. ಅಪ್ಪು ನೆನಪಲ್ಲೇ ಪವರ್ ಸ್ಟಾರ್ ಹುಟ್ಟು ಹಬ್ಬದ ದಿನದಂದು ಚಿತ್ರದ ಶೂಟಿಂಗ್ ಶುರು ಮಾಡಲು ಸಂತೋಷ್ ಆನಂದ್ ರಾಮ್ ಶೆಡ್ಯೂಲ್ ಫಿಕ್ಸ್ ಮಾಡಿದ್ದಾರೆ.
ಯುವ ಚಿತ್ರಕ್ಕೆ ರುಕ್ಮಿಣಿ ವಸಂತ ಅವರನ್ನು ಫೈನಲ್ ಮಾಡಿ ಚಿತ್ರವನ್ನು ಅದ್ದೂರಿಯಾಗಿ ರಿಲೀಸ್ ಮಾಡುವ ಅಲೋಚನೆಯಲ್ಲಿ ಹೊಂಬಾಳೆ ಬಳಗ ಇದೆ ಎನ್ನಲಾಗಿದೆ.
__
Be the first to comment