ಕಳೆದ ವಾರ ದೊಡ್ಡ ಗಣಪತಿ ದೇವಸ್ಥಾನದಲ್ಲಿ ‘ಭರಣಿ – ಪಾರ್ವತಮ್ಮನ ಮಗ’ ಚಿತ್ರದ ಮುಹೂರ್ತವಿತ್ತು. ‘ದುನಿಯಾ’ ಯೋಗಿ ಬಂದು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಹೋದರು. ನಂತರ ಚಿತ್ರದ ನಿರ್ದೇಶಕ ಚನಾನಿರಾಜ ಅವರು ಚಿತ್ರದ ಹಾಡುಗಳನ್ನು ಡಿಸೆಂಬರ್ ಆರಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದರು.
ಇದೊಂದು ಅಪ್ಪಟ ಗ್ರಾಮೀಣ ಚಿತ್ರವಾಗಿದ್ದು, ಯೋಗಿ ಅವರ ಸಂಬಂಧಿ ಮಾಧವ್ ಮತ್ತು ಸ್ವಾತಿ ಕೊಂಡೆ ನಾಯಕ-ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ತಾರಾ ಅವರು ತಾಯಿಯ ಪಾತ್ರ ಮಾಡುತ್ತಿದ್ದಾರೆ. ಒಂದು ಆನೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ. ಚಿತ್ರಕ್ಕೆ ಮಂಜು ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಶಿವಕುಮಾರ್ ಅವರ ಛಾಯಾಗ್ರಹಣ ಮತ್ತು ವಿವೇಕ್ ಚಕ್ರವರ್ತಿ ಅವರ ಸಂಗೀತ ಈ ಚಿತ್ರಕ್ಕಿದೆ
Be the first to comment