ಈ ವಾರ ತೆರೆಗೆ ಸಾಲು ಸಾಲು ಚಿತ್ರಗಳು

ಈ ವಾರ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ.

ದಿಗಂತ್, ನೀನಾಸಂ ಸತೀಶ್ ನಟನೆಯ ‘ಲೈಫು ಇಷ್ಟೇನೆ’ ಸಿನಿಮಾ ರೀ ರಿಲೀಸ್ ಆಗುತ್ತಿದೆ. 10 ವರ್ಷಗಳ ಹಿಂದೆ ರಿಲೀಸ್ ಆಗಿದ್ದ ಚಿತ್ರ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದೆ.

ಈ ವಾರ ತೆರೆಗೆ ಬರುತ್ತಿರುವ ಸಿನಿಮಾಗಳಲ್ಲಿ ರಾಮೇನಹಳ್ಳಿ ಜಗನ್ನಾಥ್‌ ನಿರ್ದೇಶನದ ‘ಹೊಂದಿಸಿ ಬರೆಯಿರಿ’ ಗಮನ ಸೆಳೆದಿದೆ. ಪ್ರವೀಣ್ ತೇಜ್, ಭಾವನಾ ರಾವ್, ಸಂಯುಕ್ತ ಹೊರನಾಡ್, ಐಶಾನಿ ಶೆಟ್ಟಿ, ನವೀನ್ ಶಂಕರ್, ಶ್ರೀ ಮಹಾದೇವ್, ಅರ್ಚನಾ ಜೋಯಿಸ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

ಅನಿತಾ ಭಟ್ ನಟನೆಯ ಸಸ್ಪೆನ್ಸ್ ಥ್ರಿಲ್ಲರ್ ‘ಬೆಂಗಳೂರು 69’ ಸಿನಿಮಾ ಈ ವಾರ ಪ್ರೇಕ್ಷಕರ ಮುಂದೆ ಬರಲಿದೆ ಚಿತ್ರದಲ್ಲಿ ಅನಿತಾ ಭಟ್ ಹಾಟ್ ಲುಕ್‌ನಲ್ಲಿ ಗಮನ ಸೆಳೆಯುತ್ತಿದ್ದಾರೆ.

ವಿಜಯ್ ಜಗದಾಲ್, ಕೃಷಿ ತಾಪಂಡ ನಟನೆಯ ‘ರೂಪಾಯಿ’, ನೈಜ ಘಟನೆಯ ‘ಪಾಲಾರ್’, ಮೆಡಿಕಲ್ ರೀಸರ್ಚ್‌ಗೆ ಸಂಬಂಧಿಸಿದ ‘ಡಿಸೆಂಬರ್ 24’, ಬದುಕಿನ ಏಳು ಬೀಳಿನ ಕಥೆ ‘ರಂಗಿನ ರಾಟೆ’ ‘ಅಂಬಾಸಿಡರ್’, ‘ಲಾಂಗ್ ಡ್ರೈವ್’, ‘ಉತ್ತಮರು’ ಹಾಗೂ ‘ಒಂದಾನೊಂದು ಕಾಲದಲ್ಲಿ’ ಸಿನಿಮಾಗಳು ರಿಲೀಸ್ ಆಗುತ್ತಿವೆ.

ಇದಲ್ಲದೆ ರಕ್ಷಿತ್ ಶೆಟ್ಟಿ ನಟನೆಯ ತಮಿಳು ಸಿನಿಮಾ ‘ವಸಂತ ಕೋಕಿಲ’ ಕನ್ನಡಕ್ಕೆ ಡಬ್ ಆಗಿ ರಿಲೀಸ್ ಆಗಲಿದೆ.

ಇಷ್ಟು ಚಿತ್ರಗಳ ನಡುವೆ ಯಾವ ಚಿತ್ರ ಯಶಸ್ಸು ಕಾಣುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!