Love birds ಫೆ.17ಕ್ಕೆ ಲವ್ ಬರ್ಡ್ಸ್ ರಿಲೀಸ್

ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಟನೆಯ ಲವ್ ಬರ್ಡ್ಸ್ ಚಿತ್ರ ಫೆ.17ಕ್ಕೆ ಬಿಡುಗಡೆಯಾಗಲಿದೆ.

ವಿವಾಹದ ನಂತರ ಆಧುನಿಕ ಯುಗದ ಜೋಡಿಗಳು ಯಾವ ರೀತಿಯಲ್ಲಿ ಜೀವನ ನಡೆಸುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ.

ಚಿತ್ರದಲ್ಲಿ ಪ್ರಮುಖ ಪಾತ್ರವಾಗಿರುವ ವಕೀಲೆ ಪಾತ್ರದಲ್ಲಿ ಸಂಯುಕ್ತ ಹೊರನಾಡ್ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಶಕ್ತಿ ಶೇಖರ್ ಛಾಯಾಗ್ರಹಣ ಮಾಡಿದ್ದು, ಕವಿ ರಾಜ್ ಅವರ ಸಾಹಿತ್ಯ, ಅರ್ಜುನ್ ಜನ್ಯ ಅವರ ಸಂಗೀತ ಇದೆ.

ಚಿತ್ರವನ್ನು ಕಡ್ಡಿಪುಡಿ ಚಂದ್ರು ನಿರ್ಮಾಣ ಮಾಡಿದ್ದಾರೆ. ಕೃಷ್ಣ ಮತ್ತು ಮಿಲನಾ ಮೊದಲು ಪ್ರೀತಂ ಗುಬ್ಬಿ ಅವರ ನಮ್ ದುನಿಯಾ ನಮ್ ಸ್ಟೈಲ್ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಂತರ ಚಾರ್ಲಿ, ಲವ್ ಮಾಕ್ಟೈಲ್ 1 ಮತ್ತು 2 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಬದುಕಿನ ಜೋಡಿಯಾಗಿರುವ ಇವರು ನಾಲ್ಕನೇ ಜಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದು ನೋಡಬೇಕಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!