ಹಿಂದಿ ಚಿತ್ರರಂಗದಲ್ಲಿ ಒಂದೇ ಒಂದು ಹಿಟ್ ಸಿನಿಮಾ ಕೊಡದೇ ಇದ್ದರೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್, ರಶ್ಮಿಕಾ ಮಂದಣ್ಣಗಿಂತ ಹೆಚ್ಚು ಸಂಭಾವನೆಗೆ ಬೇಡಿಕೆ ಇಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಸೌತ್ ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಭಾರೀ ಸಂಭಾವನೆಯನ್ನೇ ಜಾನ್ವಿ ಕೇಳಿದ್ದಾರೆ. ಜ್ಯೂನಿಯರ್ ಎನ್‌ಟಿಆರ್‌ಗೆ ನಾಯಕಿಯಾಗುವ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡ್ತಿರುವ ಜಾನ್ವಿ ದುಬಾರಿ ಸಂಭಾವನೆ ಕೇಳಿ ಎಲ್ಲರ ಹುಬ್ಬೇರಿಸಿದ್ದಾರೆ.
`ಪುಷ್ಪ’ ಮತ್ತು `ಸೀತಾ ರಾಮಂ’ ಚಿತ್ರದಲ್ಲಿ ನಟಿಸಿದ್ದ ರಶ್ಮಿಕಾ, ಮೃಣಾಲ್ ಠಾಕೂರ್‌ಗಿಂತ ಹೆಚ್ಚು ಸಂಭಾವನೆಗೆ ಜಾನ್ವಿ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ʻಪುಷ್ಪʼ ಸಕ್ಸಸ್ ನಂತರ ರಶ್ಮಿಕಾ ಮಂದಣ್ಣ 5 ಕೋಟಿಗಿಂತ ಅಧಿಕ ಸಂಭಾವನೆಯನ್ನು ತಮ್ಮ ಮುಂಬರುವ ಚಿತ್ರಗಳಿಗೆ ಪಡೆಯುತ್ತಿದ್ದಾರೆ. ಹೀಗಿರುವಾಗ ರಶ್ಮಿಕಾಗಿಂತ ಭಾರಿ ಸಂಭಾವನೆಗೆ ಜಾನ್ವಿ ಡಿಮ್ಯಾಂಡ್ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ.
___
Be the first to comment