Triple Riding Movie Reviews : ಮೂವರ ಪ್ರೀತಿಯ ಒದ್ದಾಟದ ತ್ರಿಬಲ್​ ರೈಡಿಂಗ್​

ಸಿನಿಮಾ: ತ್ರಿಬಲ್​ ರೈಡಿಂಗ್​

ನಿರ್ದೇಶನ: ಮಹೇಶ್‌ ಗೌಡ
ನಿರ್ಮಾಣ: ರಾಮ್​ಗೋಪಾಲ್​ ವೈ.ಎಂ.
ತಾರಾಗಣ: ಗಣೇಶ್‌, ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಶೋಭರಾಜ್‌, ಶರತ್‌ ಲೋಹಿತಾಶ್ವ, ರವಿಶಂಕರ್‌ ಗೌಡ
ರೇಟಿಂಗ್‌: 3/5

ಮೂವರು ಚೆಲುವೆಯರ ಪ್ರೀತಿಯಲ್ಲಿ ಸಿಕ್ಕಿಕೊಂಡು ಹೀರೋ ಸಂಕಷ್ಟ ಅನುಭವಿಸುವ ಕಥೆಯ ತ್ರಿಬಲ್​ ರೈಡಿಂಗ್​ ಸಂಕಷ್ಟದ ಜೊತೆಗೆ ನಗು ತರಿಸುವ ಮೂಲಕ ಗಮನ ಸೆಳೆಯುತ್ತದೆ.

ಚಿತ್ರದ ಶೀರ್ಷಿಕೆಯೇ ಸೂಚಿಸುವಂತೆ ಇದು ಮೂರು ಪ್ರೇಮ್​ ಕಹಾನಿ ಇರುವ ಸಿನಿಮಾ. ಗಣೇಶ್ ಅವರು ಪ್ರೀತಿ ಪಡೆಯಲು ಒದ್ದಾಡುವ ಪ್ರೇಮಿಯಾಗಿ ಈಗಾಗಲೇ ಅನೇಕ ಚಿತ್ರಗಳಲ್ಲಿ ಜನರನ್ನು ನಟಿಸಿದ್ದಾರೆ. ‘ತ್ರಿಬಲ್​ ರೈಡಿಂಗ್​’ ಸಿನಿಮಾದಲ್ಲೂ ಅದು ಟ್ವಿಸ್ಟ್ ಕಥೆಯ ಮೂಲಕ ಮುಂದುವರಿದಿದೆ.

ಅದಿತಿ ಪ್ರಭುದೇವ, ಮೇಘಾ ಶೆಟ್ಟಿ, ರಚನಾ ಇಂದರ್​ ಅವರು ರಮ್ಯಾ, ರಕ್ಷಿತಾ, ರಾಧಿಕಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಎಂಬ ಪಾತ್ರ ಎಂಟ್ರಿ ಕೊಟ್ಟಿದ್ದು, ಅದನ್ನು ಚಿತ್ರಮಂದಿರದಲ್ಲಿ ನೋಡುವುದೇ ಸೂಕ್ತ.

ಲವ್​ ಸ್ಟೋರಿಗಿಂತಲೂ ಕಾಮಿಡಿಯನ್ನೇ ಹೆಚ್ಚಾಗಿ ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾ ಹಿಡಿಸುತ್ತದೆ. ಗಣೇಶ್ ಅವರ ಜೊತೆಗೆ ಸಾಧು ಕೋಕಿಲ, ರಂಗಾಯಣ ರಘು, ಕುರಿ ಪ್ರತಾಪ್​, ರಚನಾ ಇಂದರ್​, ರವಿಶಂಕರ್​ ಗೌಡ ಭರಪೂರ ನಗಿಸುತ್ತಾರೆ.

ಚಿತ್ರದಲ್ಲಿ ರವಿಶಂಕರ್​, ಶೋಭರಾಜ್​, ಶರತ್​ ಲೋಹಿತಾಶ್ವ ಅವರು ಆಗಾಗ ಕಾಣಿಸಿಕೊಂಡು ಅಬ್ಬರಿಸಿದ್ದಾರೆ.

ಮೇಕಿಂಗ್​ ವಿಚಾರದ ಬಗ್ಗೆ ಹೆಚ್ಚು ಗಮನ ಹರಿಸುವ ಅವಶ್ಯಕತೆ ಇತ್ತು ಎಂದು ಚಿತ್ರ ನೋಡಿದವರಿಗೆ ಅನಿಸುತ್ತದೆ. ಹಾಡುಗಳು ನಿರೀಕ್ಷಿತ ಮಟ್ಟ ಮುಟ್ಟುವಲ್ಲಿ ವಿಫಲ ಆದಂತೆ ತೋರುತ್ತವೆ. ಒಟ್ಟಾರೆ ಹೇಳುವುದಾದರೆ ಇಡೀ ಸಿನಿಮಾವನ್ನು ಹಾಸ್ಯದ ಶೈಲಿಯಲ್ಲಿ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!