ನಟನೆಗೆ ಗುಡ್ ಬೈ ಹೇಳುತ್ತಾರಾ ಸಾಯಿ ಪಲ್ಲವಿ?

ಸೌತ್ ಸ್ಟಾರ್ ನಟಿ ಸಾಯಿ ಪಲ್ಲವಿ ನಟನೆ ಬಿಟ್ಟು ಡಾಕ್ಟರ್ ಆಗಿ ಸೇವೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.

ಸಾಯಿ ಪಲ್ಲವಿ ಒಂದು ಆಸ್ಪತ್ರೆಯನ್ನು ಕಟ್ಟಿಸುತ್ತಿದ್ದು, ಅಲ್ಲಿ ವೈದ್ಯೆಯಾಗಿ ತಮ್ಮ ಮುಂದಿನ ಜೀವನ ಕಳೆಯಲು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ.

ಅದೇ ಕಾರಣಕ್ಕೆ ಆಕೆ ಯಾವುದೇ ಹೊಸ ಚಿತ್ರಕ್ಕೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಬರುತ್ತಿರುವ ಅವಕಾಶಗಳನ್ನು ರೌಡಿ ಬೇಬಿ ತಿರಸ್ಕರಿಸುತ್ತಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ಸಾಯಿ ಪಲ್ಲವಿ ಇತ್ತೀಚೆಗೆ ನಟಿಸಿದ ‘ವಿರಾಟ ಪರ್ವಂ’ ಹಾಗೂ ‘ಗಾರ್ಗಿ’ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋಲುಂಡಿದ್ದವು. ಹಾಗಾಗಿ ಅವರು ನಟನೆ ಬಿಟ್ಟು ಡಾಕ್ಟರ್ ಆಗಲು ಮುಂದಾಗಿದ್ದಾರೆ ಎನ್ನಲಾಗಿದೆ.

ತಮಿಳುನಾಡಿನಲ್ಲಿ ಹುಟ್ಟಿ ಬೆಳೆದ ಸಾಯಿ ಪಲ್ಲವಿ ಓದಿದ್ದು ಎಂಬಿಬಿಎಸ್. ಚಿಕ್ಕಂದಿನಿಂದ ಡ್ಯಾನ್ಸ್‌ ಎಂದರೆ ಅಚ್ಚುಮೆಚ್ಚು. ಕಿರುತೆರೆಯ ಡ್ಯಾನ್ಸ್ ಶೋಗಳಲ್ಲಿ ಕುಣಿಯೋಕೆ ಆರಂಭಿಸಿದರು. ಅಲ್ಲಿಂದ ಮುಂದೆ ತಮಿಳಿನ ‘ಕಸ್ತೂರಿ ಮಾನ್’ ಚಿತ್ರದಲ್ಲಿ ಕಾಲೇಜು ಹುಡುಗಿಯಾಗಿ ಮಿಂಚಿದರು. ಮಲಯಾಳಂನ ‘ಪ್ರೇಮಂ’ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದರು. ನಂತರ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟಿಸಿದರು.


 

Be the first to comment

Leave a Reply

Your email address will not be published. Required fields are marked *

Translate »
error: Content is protected !!