ಈ ಹಿಂದೆ ಜೋಕಾಲಿ ಮತ್ತು ರಾಜಹಂಸ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ ಗೌರಿಶಂಕರ್ ಎಸ್.ಆರ್. ಜಿ. ಈಗ ಜನಮನ ಸಿನಿಮಾಸ್ ಮೂಲಕ “ಕೆರೆಬೇಟೆ” ಚಿತ್ರದಲ್ಲಿ ನಾಯಕ ಹಾಗೂ ನಿರ್ಮಾಪಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮಲೆನಾಡ ಭಾಗದ ಕೆರೆಬೇಟೆ ಅನ್ನೋ ಸಂಸ್ಕೃತಿಯನ್ನು ಚಿತ್ರದ ಒಂದು ಮುಖ್ಯ ಭಾಗವಾಗಿ ಬೆಸೆದುಕೊಂಡು ಹಳ್ಳಿ ಸೊಗಡಿನ ನೈಜತೆಯೊಂದಿಗೆ ಪ್ರೇಮ ಕಥೆಯ ಎಳೆಯ ಮೂಲಕ ನಿರ್ಮಿಸಲು ಸಿದ್ದರಾಗಿದ್ದಾರೆ.
ಈ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಆರಂಭಿಸಿದ್ದು, ಸಿಗಂದೂರು , ಕೋಗಾರ್ ಘಾಟ್ ಹಾಗೂ ಶಿವಮೊಗ್ಗ ಜಿಲ್ಲೆಯ ಕೆಲವು ಭಾಗಗಳಲ್ಲಿ ಚಿತ್ರೀಕರಿಸಲಿದ್ದಾರಂತೆ. ಗುರುಶಿವ ಹಿತೈಶಿ ನಿರ್ದೇಶನ ಮಾಡುತ್ತಿರುವ ಪ್ರಥಮ ಚಿತ್ರವಾಗಿದ್ದು, ಬಹಳಷ್ಟು ಪೂರ್ವ ತಯಾರಿ ಮಾಡಿಕೊಂಡು ಮುಂದಾಗಿದ್ದಾಗಿದ್ದಾರೆ.
ಗೌರಿಶಂಕರ್ ಗೆ ನಾಯಕಿಯಾಗಿ ಯುವ ಪ್ರತಿಭೆ ಬಿಂದು ಶಿವರಾಮ್ ಅಭಿನಯಿಸುತ್ತಿದ್ದು, ಉಳಿದಂತೆ ಗೋಪಾಲ ದೇಶಪಾಂಡೆ, ಸಂಪತ್, ಹರಿಣಿ, ರಘರಾಜನಂದ, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್ ಸೇರಿದಂತೆ ಹಲವಾರು ಪ್ರತಿಭೆಗಳು ಅಭಿನಯಿಸುತ್ತಿದ್ದಾರೆ.
ಈ ಚಿತ್ರಕ್ಕೆ ಕೀರ್ತನ್ ಪೂಜಾರಿ ಛಾಯಾಗ್ರಹಣ , ಗಗನ್ ಬಡೇರಿಯಾ ಸಂಗೀತ, ಜ್ಞಾನೇಶ್ ಸಂಕಲನ, ಡಿಫರೆಂಟ್ ಡ್ಯಾನಿ ಸಾಹಸ ಮಾಡುತ್ತಿದ್ದಾರೆ. ಈಗ ದೇವರ ಸನ್ನಿಧಿಯ ಮೂಲಕ ಚಿತ್ರದ ಚಿತ್ರೀಕರಣ ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನ ಚಿತ್ರತಂಡ ನೀಡಲಿದೆಯಂತೆ.
Be the first to comment