ಶಶಾಂಕ್ ಜೊತೆ ಡಾರ್ಲಿಂಗ್ ಕೃಷ್ಣ ನಟನೆ

ಡಾರ್ಲಿಂಗ್ ಕೃಷ್ಣ, ಶಶಾಂಕ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ‘ಕೌಸಲ್ಯ ಸುಪ್ರಜಾ ರಾಮ’ ಎಂದು ಹೆಸರಿಡಲಾಗಿದೆ.

ಲವ್ ಮಾಕ್ಟೇಲ್ ಖ್ಯಾತಿಯ ಡಾರ್ಲಿಂಗ್ ಕೃಷ್ಣ ಮೊದಲ ಬಾರಿಗೆ ಲವ್ 360 ಸಿನಿಮಾದ ನಿರ್ದೇಶಕ ಶಶಾಂಕ್ ಅವರೊಂದಿಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹೊಸ ಚಿತ್ರ ಕುತೂಹಲ ಉಂಟುಮಾಡಿದೆ.

ಕೆಲವೇ ಕೆಲವು ನಿರ್ದೇಶಕರು ಇಂದಿಗೂ ಗುಣಮಟ್ಟದ ಕೌಂಟುಬಿಕ ಚಿತ್ರಗಳನ್ನು ನೀಡುತ್ತಿದ್ದಾರೆ. ಅಂತವರಲ್ಲಿ ಖಂಡಿತವಾಗಿಯೂ ನಿರ್ದೇಶಕ ಶಶಾಂಕ್ ಒಬ್ಬರು. ನಾನು ಯಾವಾಗಲೂ ಸ್ಕ್ರಿಪ್ಟ್ ಮೇಲೆ ಗಮನ ಹರಿಸುತ್ತೇನೆ. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾದ ಭಾಗವಾಗಲು ಬಯಸುತ್ತೇನೆ. ಇದು ಸರಿಯಾದ ಚಿತ್ರಕಥೆ ಮತ್ತು ನಿರ್ದೇಶಕರು ಎಂದು ನಾನು ಭಾವಿಸಿದೆ ಎಂದು ಕೃಷ್ಣ ಹೇಳಿದ್ದಾರೆ.

‘ಇಲ್ಲಿ ನಾನು ಕೌಸಲ್ಯ ಅವರ ಮಗನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಮತ್ತು ಚಿತ್ರವು ತಾಯಿ-ಮಗನ ಸೆಂಟಿಮೆಂಟ್ ಅನ್ನು ಒಳಗೊಂಡಿದೆ. ‘ಚಿತ್ರದಲ್ಲಿ ನನಗೆ ಎರಡು ಛಾಯೆಗಳಿದ್ದು, ಶೀಘ್ರದಲ್ಲೇ ಲುಕ್ ರಿವೀಲ್ ಆಗಲಿದೆ ಎಂದಿದ್ದಾರೆ.

ಕೌರವ ಪ್ರೊಡಕ್ಷನ್ ಹೌಸ್ ಮತ್ತು ಶಶಾಂಕ್ ಸಿನಿಮಾಸ್ ಜಂಟಿಯಾಗಿ ನಿರ್ಮಿಸಿರುವ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಸುಜ್ಞಾನ್ ಡಿಒಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಡಾರ್ಲಿಂಗ್ ಕೃಷ್ಣ ಅವರ ‘ಕೃಷ್ಣ ಬ್ಯಾಚುಲರ್, ದಿಲ್ ಪಸಂದ್, ಶುಗರ್ ಫ್ಯಾಕ್ಟರಿ, ಲವ್ ಬರ್ಡ್ಸ್ ಮತ್ತು ಲವ್ ಮಿ ಆರ್ ಹೇಟ್ ಮಿ’ ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!