Champion Film Review: ಹಠ ಸಾಧನೆಯ ‘ಚಾಂಪಿಯನ್ ‘

ಚಿತ್ರ: ಚಾಂಪಿಯನ್​​

ನಿರ್ದೇಶನ : ಶಾಹುರಾಜ್ ಶಿಂಧೆ
ನಿರ್ಮಾಣ : ಶಿವಾನಂದ್ ಎಸ್ ನೀಲಣ್ಣನವರ್​​​
ಪಾತ್ರವರ್ಗ: ಸಚಿನ್ ಧನಪಾಲ್, ಅದಿತಿ ಪ್ರಭುದೇವ, ಸನ್ನಿ ಲಿಯೋನ್​​, ನಟ ದೇವರಾಜ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್ ಮುಂತಾದವರು
ರೇಟಿಂಗ್: 4/5

ಸಾಧನೆ ಮಾಡಲು ಶ್ರಮ, ಹಠ ಬೇಕು. ಆಗ ಮಾತ್ರ ಚಾಂಪಿಯನ್ ಆಗೋಕೆ ಸಾಧ್ಯ ಎನ್ನುವುದು ಶುಕ್ರವಾರ ಬಿಡುಗಡೆ ಆದ ‘ಚಾಂಪಿಯನ್’ ಚಿತ್ರದ ಸಾರಾಂಶ.

ಕ್ರೀಡೆ, ನಕಲಿ ನೋಟುಗಳ ಚಲಾವಣೆಯ ಜಾಲದ ಸುತ್ತ ‘ಚಾಂಪಿಯನ್‌’ ಮೂಡಿ ಬಂದಿದೆ. ಈ ಚಿತ್ರವು ಕನ್ನಡಕ್ಕೆ ಮತ್ತೊಬ್ಬ ಮಾಸ್‌ ಹೀರೋ ಪರಿಚಯಿಸಿದೆ.

ಮೊದಲ ಚಿತ್ರದಲ್ಲೇ ಸಚಿನ್​ ಧನಪಾಲ್​ ಮೊದಲ ಅದ್ಭುತವಾಗಿ ನಟಿಸಿದ್ದಾರೆ. ಅದ್ಧೂರಿ ಮೇಕಿಂಗ್, ಭರ್ಜರಿ ಆಕ್ಶನ್, ಕಲರ್​ಫುಲ್​ ಸಾಂಗ್​​​, ವಿಲನ್ ಗಳ ಅಬ್ಬರ ಬಿಗ್​ ಸ್ಕ್ರೀನ್​ ಮೇಲೆ ಸಖತ್​ ಆಗಿ ಮೂಡಿ ಬಂದಿದೆ. ಟ್ವಿಸ್ಟ್​ ಮೇಲೆ ಟ್ವಿಸ್ಟ್​​ ಇರೋ ಕ್ಲೈಮ್ಯಾಕ್ಸ್​ನಲ್ಲಿ ಸಚಿನ್​ ಖಡಕ್​ ಪೊಲೀಸ್​ ಆಫೀಸರ್​ ಆಗಿ ನಟಿಸಿದ್ದಾರೆ.

ಸಚಿನ್​​ ಹಾಗೂ ಅದಿತಿ ಲವ್​ಸ್ಟೋರಿ ಸಕ್ಸಸ್​ ಆಗುತ್ತಾ? ಸಚಿನ್​ ಅಥ್ಲೆಟಿಕ್ಸ್ ಚಾಂಪಿಯನ್​ ಆಗ್ತಾರಾ? ನಕಲಿ ನೋಟುಗಳ ಜಾಲದ ಗ್ಯಾಂಗಿನಿಂದ ನಾಯಕಿ ಕುಟುಂಬ ಉಳಿಯುತ್ತದೆಯೇ ಎನ್ನುವುದಕ್ಕೆ ಚಿತ್ರ ನೋಡಬೇಕಿದೆ.

ದೇವರಾಜ್, ಸುಮನ್, ಪ್ರದೀಪ್ ರಾಹುತ್, ಚಿಕ್ಕಣ್ಣ, ಆದಿ ಲೋಕೇಶ್, ರಂಗಾಯಣ ರಘು, ಅವಿನಾಶ್, ಕಾಕ್ರೋಜ್ ಸುಧಿ, ಶೋಭರಾಜ್, ಪ್ರಶಾಂತ್ ಸಿದ್ದಿ, ಗಿರಿ, ಮಂಡ್ಯ ರಮೇಶ್ ಸೇರಿದಂತೆ ಸಾಕಷ್ಟು ಕಲಾವಿದರ ಆ್ಯಕ್ಟಿಂಗ್​ ನೆಕ್ಸ್ಟ್​​ ಲೆವೆಲ್​​​ನಲ್ಲಿದೆ. ಶಾಹುರಾಜ್ ಶಿಂಧೆ ಡೈರೆಕ್ಷನ್ ಗಮನ ಸೆಳೆಯುತ್ತದೆ.

ಅಜನೀಶ್‌ ಬಿ ಲೋಕನಾಥ್‌ ಸಂಗೀತ, ಸರ್ವಣನ್‌ ನಟರಾಜನ್‌ ಕ್ಯಾಮೆರಾ ವರ್ಕ್ ಫಸ್ಟ್ ಕ್ಲಾಸ್. ಗಂಭೀರ ಕತೆಯಲ್ಲಿ ಸನ್ನಿ ಲಿಯೋನ್‌ ಹೆಜ್ಜೆ ಹಾಕಿ, ನೋಡುಗರಿಗೆ ಹೊಸ ಕಿಕ್‌ ಕೊಡುತ್ತಾರೆ. ಮೊದಲ ಪ್ರಯತ್ನದಲ್ಲೇ ಸಚಿನ್‌ ಧನ್‌ಪಾಲ್‌ ಫಸ್ಟ್‌ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ. ಚಿತ್ರದ ನಾಯಕಿ ಅದಿತಿ ಪ್ರಭುದೇವ ಮುದ್ದಾಗಿ ಚಿತ್ರದಲ್ಲಿ ಆವರಿಸಿದ್ದಾರೆ.
________

Be the first to comment

Leave a Reply

Your email address will not be published. Required fields are marked *

Translate »
error: Content is protected !!