ಕ್ರಿಕೆಟಿಗ ಶಿಖರ್ ಧವನ್ ಬಾಲಿವುಡ್ಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ.
‘ಡಬಲ್ ಎಕ್ಸ್ಎಲ್’ ಎಂಬ ಚಿತ್ರದಲ್ಲಿ ನಟಿ ಹುಮಾ ಖುರೇಷಿ ಮತ್ತು ಸೋನಾಕ್ಷಿ ಸಿನ್ಹಾ ಜೊತೆ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ.
‘ಡಬಲ್ ಎಕ್ಸ್ಎಲ್’ ಸಿನಿಮಾ ಇಬ್ಬರು ಬೊಜ್ಜಿನ ಮಹಿಳೆಯರ ಕಥೆ. ಆಕೆ ತನ್ನ ಕನಸನ್ನು ಹೇಗೆ ಈಡೇರಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ.
‘ಡಬಲ್ ಎಕ್ಸ್ಎಲ್’ ಚಿತ್ರವನ್ನು ಸತ್ರಂ ರಮಣಿ ನಿರ್ದೇಶಿಸಿದ್ದಾರೆ. ಈ ಚಿತ್ರವು ಅಧಿಕ ತೂಕ ಹೊಂದಿರುವ ಮಹಿಳೆಯರ ಬಗ್ಗೆ ಹೇಳಲು ಹೊರಟಿದೆ. ಇದರಲ್ಲಿ ಶಿಖರ್ ಧವನ್ ನಾಯಕ ನಟನಾಗಿ ಕಾಣಿಸುತ್ತಿಲ್ಲ. ಈ ಚಿತ್ರದಲ್ಲಿ ಅವರು ಅತಿಥಿ ಪಾತ್ರವನ್ನು ನಿರ್ವಹಿಸಿದ್ದಾರೆ ಎನ್ನಲಾಗಿದೆ.
ಡಬಲ್ ಎಕ್ಸ್ಎಲ್’ ಅಕ್ಟೋಬರ್ 14ರಂದು ಬಿಡುಗಡೆ ಆಗಲಿದೆ. ‘ಡಬಲ್ ಎಕ್ಸ್ಎಲ್’ ನ್ನು ಗುಲ್ಶನ್ ಕುಮಾರ್, ಟಿ-ಸೀರೀಸ್, ವಕಾವೊ ಫಿಲ್ಮ್ಸ್ ಮತ್ತು ಮುದಸ್ಸರ್ ಅಜೀಜ್ ಅವರು ಟಿ-ಸೀರೀಸ್ ಫಿಲ್ಮ್ಸ್ ಸಹಯೋಗದಲ್ಲಿ ಪ್ರಸ್ತುತಪಡಿಸಿದ್ದಾರೆ. ಇದು ವಕಾವೊ ಫಿಲ್ಮ್ಸ್, ಅಲೆಮೆನ್3 ಎಂಟರ್ಟೈನ್ಮೆಂಟ್ ಮತ್ತು ರಿಕ್ಲೈನಿಂಗ್ ಸೀಟ್ಸ್ ಸಿನಿಮಾ ಪ್ರೊಡಕ್ಷನ್ಸ್ನ ಒಡೆತನದಲ್ಲಿದೆ.
ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮತ್ತು ಹುಮಾ ಖುರೇಷಿ ತಮ್ಮ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಲು ದೇಹ ತೂಕ ಹೆಚ್ಚು ಮಾಡಿಕೊಂಡಿದ್ದಾರೆ. ನಟಿಯರು 15ರಿಂದ 20 ಕೆಜಿ ತೂಕ ಹೆಚ್ಚಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
__
Be the first to comment