ಪುನೀತ್ ಗೆ ಜೀವಮಾನ ಸಾಧನೆ ಪ್ರಶಸ್ತಿ

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಫಿಲ್ಮ್ ಫೇರ್ ​ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪುನೀತ್ ರಾಜ್ ಕುಮಾರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ ಕಲಾವಿದರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕನ್ನಡದಲ್ಲಿ ನಟ ಧನಂಜಯ್​ ಅವರಿಗೆ ‘ಬಡವ ರಾಸ್ಕಲ್​’ ಚಿತ್ರದಲ್ಲಿನ ಅಭಿನಯಕ್ಕಾಗಿ ‘ಅತ್ಯುತ್ತಮ ನಟ’ ಪ್ರಶಸ್ತಿ ನೀಡಲಾಯಿತು. ಯಜ್ಞಾಶೆಟ್ಟಿ ಅವರು ‘ಆಕ್ಟ್​ 1978’ ಸಿನಿಮಾದಲ್ಲಿನ ನಟನೆಗಾಗಿ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪದೆದರು.

ರಾಜ್​ ಬಿ. ಶೆಟ್ಟಿ ಅವರಿಗೆ ‘ಗರುಡ ಗಮನ ವೃಷಭ ವಾಹನ’ ಚಿತ್ರಕ್ಕಾಗಿ ‘ಅತ್ಯುತ್ತಮ ನಿರ್ದೇಶನ’ ಪ್ರಶಸ್ತಿ ನೀಡಲಾಯಿತು.

ಕನ್ನಡ ವಿಭಾಗ:
ಅತ್ಯುತ್ತಮ ನಟ- ಧನಂಜಯ್ (ಬಡವ ರಾಸ್ಕಲ್)
ಅತ್ಯುತ್ತಮ ನಟಿ- ಯಜ್ಞ ಶೆಟ್ಟಿ (ಆಕ್ಟ್ 1978)
ಅತ್ಯುತ್ತಮ ಚಿತ್ರ – ಆಕ್ಟ್ 1978
ಅತ್ಯುತ್ತಮ ನಿರ್ದೇಶಕ – ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)
ಪೋಷಕ ಅತ್ಯುತ್ತಮ ನಟ (ಪುರುಷ) – ಬಿ. ಸುರೇಶ (ಆಕ್ಟ್ 1978)
ಪೋಷಕ ಅತ್ಯುತ್ತಮ ನಟಿ (ಮಹಿಳೆ) – ಉಮಾಶ್ರೀ (ರತ್ನನ್ ಪ್ರಪಂಚ)
ಅತ್ಯುತ್ತಮ ಸಂಗೀತ ಆಲ್ಬಮ್ – ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಸಾಹಿತ್ಯ – ಜಯಂತ್ ಕಾಯ್ಕಿಣಿ- ತೇಲಾಡು ಮುಗಿಲೆ (ಆಕ್ಟ್ 1978)
ಅತ್ಯುತ್ತಮ ಹಿನ್ನೆಲೆ ಗಾಯಕ – ರಘು ದೀಕ್ಷಿತ್- ಮಲೇ ಮಲೇ ಮಲೇ (ನಿನ್ನ ಸನಿಹಕೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಅನುರಾಧಾ ಭಟ್- ಧೀರ ಸಮ್ಮೋಹಗಾರ (ಬಿಚ್ಚುಗಟ್ಟಿ)
ಅತ್ಯುತ್ತಮ ಛಾಯಾಗ್ರಹಣ – ಶ್ರೀಶ ಕುಡುವಳ್ಳಿ (ರತ್ನನ್ ಪ್ರಪಂಚ)
ಬೆಸ್ಟ್ ಕೊರಿಯೋಗ್ರಫಿ – ಜಾನಿ ಮಾಸ್ಟರ್ – ಫೀಲ್ ದಿ ಪವರ್ (ಯುವರತ್ನ)
ಜೀವಮಾನದ ಸಾಧನೆ ಪ್ರಶಸ್ತಿ – ಪುನೀತ್ ರಾಜ್‍ಕುಮಾರ್

ತೆಲುಗು ವಿಭಾಗ:
ಅತ್ಯುತ್ತಮ ನಟ (ಪುರುಷ) – ಅಲ್ಲು ಅರ್ಜುನ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನಟಿ (ಮಹಿಳೆ) – ಸಾಯಿ ಪಲ್ಲವಿ (ಲವ್ ಸ್ಟೋರಿ)
ಅತ್ಯುತ್ತಮ ಚಿತ್ರ – ಪುಷ್ಪ: ದಿ ರೈಸ್- ಭಾಗ 1
ಅತ್ಯುತ್ತಮ ನಿರ್ದೇಶಕ – ಸುಕುಮಾರ್ ಬಂಡ್ರೆಡ್ಡಿ (ಪುಷ್ಪಾ: ದಿ ರೈಸ್- ಭಾಗ 1)
ಪೋಷಕ ಅತ್ಯುತ್ತಮ ನಟ- ಮುರಳಿ ಶರ್ಮಾ (ಅಲಾ ವೈಕುಂಠಪುರಮುಲೂ)
ಪೋಷಕ ಅತ್ಯುತ್ತಮ ನಟಿ- ಟಬು (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಸಾಹಿತ್ಯ – ಸೀತಾರಾಮ ಶಾಸ್ತ್ರಿ – ಲೈಫ್ ಆಫ್ ರಾಮ್ (ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕ- ಸಿದ್ ಶ್ರೀರಾಮ್ – ಶ್ರೀವಲ್ಲಿ (ಪುಷ್ಪಾ: ದಿ ರೈಸ್- ಭಾಗ 1)
ಅತ್ಯುತ್ತಮ ಹಿನ್ನೆಲೆ ಗಾಯಕಿ- ಇಂದ್ರಾವತಿ ಚೌಹಾಣ್ – ಊ ಅಂತವ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ನೃತ್ಯ ಸಂಯೋಜನೆ – ಶೇಖರ್ ಮಾಸ್ಟರ್ – ರಾಮುಲೂ ರಾಮುಲಾ (ಅಲಾ ವೈಕುಂಠಪುರಮುಲೂ)
ಅತ್ಯುತ್ತಮ ಛಾಯಾಗ್ರಹಣ – ಮಿರೋಸ್ಲಾ ಕುಬಾ ಬ್ರೋಜೆಕ್ (ಪುಷ್ಪ: ದಿ ರೈಸ್- ಭಾಗ 1)
ಅತ್ಯುತ್ತಮ ಚೊಚ್ಚಲ ನಟ – ಪಂಜಾ ವೈಷ್ಣವ್ ತೇಜ್ (ಉಪ್ಪೆನಾ)
ಅತ್ಯುತ್ತಮ ಚೊಚ್ಚಲ ನಟಿ – ಕೃತಿ ಶೆಟ್ಟಿ (ಉಪ್ಪೆನಾ)
ಜೀವಮಾನದ ಸಾಧನೆ ಪ್ರಶಸ್ತಿ – ಅಲ್ಲು ಅರವಿಂದ್

ತಮಿಳು ವಿಭಾಗ:
ಅತ್ಯುತ್ತಮ ನಟ – ಸೂರ್ಯ (ಸೂರರೈ ಪೊಟ್ರು)
ಅತ್ಯುತ್ತಮ ನಟಿ- ಲಿಜೋಮೋಲ್ ಜೋಸ್ (ಜೈ ಭೀಮ್)
ಅತ್ಯುತ್ತಮ ಚಿತ್ರ – ಜೈ ಭೀಮ್
ಅತ್ಯುತ್ತಮ ನಿರ್ದೇಶಕ – ಸುಧಾ ಕೊಂಗರ (ಸೂರರೈ ಪೊಟ್ರು)
ಪೋಷಕ ಅತ್ಯುತ್ತಮ – ಪಶುಪತಿ (ಸರಪತ್ತ ಪರಂಬರೈ)
ಪೋಷಕ ನಟಿ – ಊರ್ವಶಿ (ಸೂರರೈ ಪೊಟ್ರು)
ಅತ್ಯುತ್ತಮ ಸಂಗೀತ ಆಲ್ಬಮ್ – ಜಿ ವಿ ಪ್ರಕಾಶ್ ಕುಮಾರ್ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕ- ಕ್ರಿಸ್ಟಿನ್ ಜೋಸ್ ಮತ್ತು ಗೋವಿಂದ ವಸಂತ- ಆಗಸಂ (ಸೂರರೈ ಪೊಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಧೀ- ಕಟ್ಟು ಪಾಯಲೆ (ಸೂರರೈ ಪೊಟ್ರು)
ಅತ್ಯುತ್ತಮ ನೃತ್ಯ ಸಂಯೋಜನೆ – ದಿನೇಶ್ ಕುಮಾರ್ – ವತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಹಣ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೊಟ್ರು)

ಮಲಯಾಳಂ ವಿಭಾಗ:
ಅತ್ಯುತ್ತಮ ನಟ- ಬಿಜು ಮೆನನ್ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ನಟಿ- ನಿಮಿಷಾ ಸಜಯನ್ (ದ ಗ್ರೇಟ್ ಇಂಡಿಯನ್ ಕಿಚನ್)
ಅತ್ಯುತ್ತಮ ಚಿತ್ರ – ಅಯ್ಯಪ್ಪನಂ ಕೋಶಿಯಂ
ಅತ್ಯುತ್ತಮ ನಿರ್ದೇಶಕ – ಸೆನ್ನಾ ಹೆಗ್ಡೆ (ತಿಂಕಾಲಜ್ಞಾ ನಿಶ್ಚಯಂ)
ಪೋಷಕ ನಟ – ಜೋಜು ಜಾರ್ಜ್ (ನಾಯಟ್ಟು)
ಪೋಷಕ ನಟಿ – ಗೌರಿ ನಂದಾ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಸಂಗೀತ ಆಲ್ಬಮ್ – ಎಂ. ಜಯಚಂದ್ರನ್ (ಸೂಫಿಯಂ ಸುಜಾತಯಂ)
ಅತ್ಯುತ್ತಮ ಸಾಹಿತ್ಯ – ರಫೀಕ್ ಅಹಮದ್ – ಅರಿಯತರಿಯತೆ (ಅಯ್ಯಪ್ಪನಂ ಕೋಶಿಯಂ)
ಅತ್ಯುತ್ತಮ ಹಿನ್ನೆಲೆ ಗಾಯಕ – ಶಹಬಾಜ್ ಅಮಾನ್ – ಆಕಾಶಮಾಯವಳೆ (ವೆಲ್ಲಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ – ಕೆ.ಎಸ್.ಚಿತ್ರ-ತೀರಮೆ (ಮಲಿಕ್)
___

Be the first to comment

Leave a Reply

Your email address will not be published. Required fields are marked *

Translate »
error: Content is protected !!