ಸಂಕಷ್ಟದಲ್ಲಿ ಉರ್ಫಿ ಜಾವೇದ್

ವಿಭಿನ್ನ ಡ್ರೆಸ್ ಗಳಿಂದ ಗಮನ ಸೆಳೆಯುವ ಬಿಗ್ ಬಾಸ್ ಓಟಿಟಿ ಖ್ಯಾತಿಯ ನಟಿ ಉರ್ಫಿ ಜಾವೇದ್ ಗೆ ತಮ್ಮ ಉದುಗೆಯಿಂದಲೇ ಸಂಕಷ್ಟ ಎದುರಾಗಿದೆ.

ಉರ್ಫಿ ಸಿಮ್ ಕಾರ್ಡಿನಲ್ಲಿ ನೇಯ್ದ ಬಟ್ಟೆಯಿಂದ ತಯಾರಾದ ಕಾಸ್ಟ್ಯೂಮ್ ಧರಿಸಿದ್ದು ಇದು ಪೊಲೀಸರ ವಿಚಾರಣೆಗೆ ಕಾರಣವಾಗಿದೆ.

ಉರ್ಫಿ ಸಿಮ್ ಕಾರ್ಡಿನಲ್ಲಿ ನೇಯ್ದ ಬಟ್ಟೆಯಿಂದ ತಯಾರಾದ ಕಾಸ್ಟ್ಯೂಮ್ ಧರಿಸಿದ್ದು, ಈ ಕಾಸ್ಟ್ಯೂಮ್ ಗಾಗಿ ನೂರಾರು ಸಿಮ್ ಕಾರ್ಡ್ ಗಳನ್ನು ಬಳಕೆ ಮಾಡಿದ್ದಾರೆ. ಈ ಪ್ರಮಾಣದ ಸಿಮ್ ಕಾರ್ಡ್ ಈಕೆಯ ಬಳಿ ಎಲ್ಲಿಂದ ಬಂದವು ಎಂದು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈ ಸಿಮ್ ಕಾರ್ಡ್ ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಇಷ್ಟೊಂದು ಸಿಮ್ ಕಾರ್ಡ್ ಕೊಟ್ಟವರನ್ನು ಯಾರು ಎಂಬ ಶೋಧ ಶುರುವಾಗಿದೆ.

ಉರ್ಫಿ ಧರಿಸುವ ಬಟ್ಟೆಯನ್ನು ತಯಾರಿಸುವ ಕಾಸ್ಟ್ಯೂಮ್ ಡಿಸೈನರ್ ಯಾರು ಎನ್ನುವ ಕುತೂಹಲ ಕೂಡ ಹಲವರಲ್ಲಿ ಮೂಡಿದೆ. ಉರ್ಫಿ ತಾವೇ ಡಿಸೈನ್ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಸಿಮ್ ಕಾರ್ಡ್ ಡಿಸೈನ್ ಐಡಿಯಾ ಕೊಟ್ಟವರು ಯಾರು ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಉರ್ಫಿ ಮನೆಗೆ ಪೊಲೀಸರು ಎಂಟ್ರಿ ಕೊಟ್ಟಿದ್ದು ಸಿಮ್ ಕಾರ್ಡ್ ಜಾಲವನ್ನು ಹುಡುಕುತ್ತಿದ್ದಾರೆ.

ಈ ಹಿಂದೆ ಗೋಣಿ ಚೀಲ, ಪ್ಲ್ಯಾಸ್ಟಿಕ್, ಹೂವುಗಳು, ಚಿಟ್ಟೆ ಹೀಗೆ ನಾನಾ ಅವತಾರಗಳಲ್ಲಿ ಕಾಣಿಸಿಕೊಂಡಿರುವ ಉರ್ಫಿಗೆ ಲಕ್ಷಾಂತರ ಅಭಿಮಾನಿಗಳು ಇದ್ದಾರೆ. ಇವರು ಧರಿಸುವ ಬಟ್ಟೆಗಳು ಟ್ರೆಂಡ್ ಆಗುತ್ತವೆ. ಯಾವಾಗಲೂ ಕ್ಯಾಮೆರಾಗಳು ಈಕೆಯನ್ನೇ ಕಾಯುತ್ತಿರುತ್ತವೆ. ಹೊಸ ಹೊಸ ವಿನ್ಯಾಸದ ಬಟ್ಟೆಗಳನ್ನು ಉರ್ಫಿ ಧರಿಸುತ್ತಾರೆ.

___

Be the first to comment

Leave a Reply

Your email address will not be published. Required fields are marked *

Translate »
error: Content is protected !!