ಸಂತೋಷ್ ಗೋಪಾಲ್ ನಿರ್ದೇಶನದ ‘ಶುಭಮಂಗಳ’ ಚಿತ್ರದ ‘ಉರುಳಿವೆ ಕ್ಷಣ’ ಎಂಬ ಲಿರಿಕಲ್ ವಿಡಿಯೋ ಇಂದು ಬಿಡುಗಡೆ ಆಗಲಿದೆ.
ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಇಂದು ಸಂಜೆ 5 ಗಂಟೆಗೆ ಹಾಡು ರಿಲೀಸ್ ಆಗಲಿದೆ.
ಪಂಚಮ್ ಜೀವ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಜೂಡಾ ಸ್ಯಾಂಡಿ ಸಂಗೀತ, ಕೆ. ಕಲ್ಯಾಣ್ ಸಾಹಿತ್ಯವಿದೆ.
ಆಯಕ್ತ ಫಿಲ್ಮ್ಸ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಹಿತಾ ಚಂದ್ರಶೇಖರ್, ಮೇಘನಾ ಗಾಂವ್ಕರ್, ಸಿದ್ಧಾರ್ಥ ಮಾಧ್ಯಮಿಕ, ರಾಕೇಶ್ ಮಾಯಾ ಹಾಗೂ ದೀಪ್ತಿ ನಾಗೇಂದ್ರ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದೊಂದು ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾ ಎಂದು ಹೇಳಲಾಗಿದೆ.
‘ಶುಭಮಂಗಳ’ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
___





Be the first to comment