ಬಿಗ್ ಬಾಸ್ ಕನ್ನಡ ಒಟಿಟಿ ಗೆದ್ದ ರೂಪೇಶ್

ಬಿಗ್ ಬಾಸ್ ಕನ್ನಡ ಒಟಿಟಿ ರಿಯಾಲಿಟಿ ಶೋದಲ್ಲಿ ರೂಪೇಶ್ ಶೆಟ್ಟಿ ವಿಜೇತ ಆಗಿ ಹೊರಹೊಮ್ಮಿದ್ದಾರೆ.

ಅದ್ದೂರಿ ಫಿನಾಲೆ ಕಾರ್ಯಕ್ರಮದಲ್ಲಿ ಟಾಪರ್‌ ಆದ ರೂಪೇಶ್ ಶೆಟ್ಟಿ ಅವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡಲಾಯಿತು.

42 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಅಂತಿಮವಾಗಿ ಫಿನಾಲೆಗೆ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ಸಾನ್ಯಾ ಐಯ್ಯರ್ , ಆರ್ಯವರ್ಧನ್ ಗುರೂಜಿ ಪ್ರವೇಶ ಪಡೆದರು. ಇವರಲ್ಲಿ ರೂಪೇಶ್ ಶೆಟ್ಟಿ ಟಾಪರ್‌ ಆದರು. ಅವರು ಟಿ.ವಿ. ಸೀಸನ್‌ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ನೇರವಾಗಿ ಅವಕಾಶ ಪಡೆದರು.

ರೂಪೇಶ್‌ ಮನೆಯಲ್ಲಿ ಯಾವ ಸ್ಪರ್ಧಿಗಳ ಜೊತೆ ಕಿರಿಕ್‌ ಮಾಡಿಕೊಳ್ಳದೇ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದರು. ತಾಳ್ಮೆಯಿಂದ ಟಾಸ್ಕ್‌ಗಳನ್ನು ಮಾಡುತ್ತಿದ್ದ ಅವರು ನೋಡುಗರ ಗಮನ ಸೆಳೆದಿದ್ದರು. ಹೆಚ್ಚು ಮತಗಳನ್ನು ಪಡೆಯುವ ಮೂಲಕ ರೂಪೇಶ್ ಟಾಪರ್‌ ಆದರು.

‘ಬಿಗ್ ಬಾಸ್ ಕನ್ನಡ ಸೀಸನ್ 9’ ಶೋ ಸೆಪ್ಟೆಂಬರ್ 24ರಿಂದ ಆರಂಭವಾಗಲಿದೆ. ಅದನ್ನು ಕಿಚ್ಚ ಸುದೀಪ್ ನಡೆಸಿಕೊಡಲಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!