ಇಂದ್ರಜಿತ್ ಹೇಳಹೊರಟಿದ್ದಾರೆ ಶಕೀಲಾ ಕಥೆಯನ್ನು ..

ಚಿತ್ರರಂಗದಲ್ಲಿ ಈಗ ಬಯೋಪಿಕ್‍ಗಳ ಜಮಾನ ಶುರುವಾಗಿದೆ. ಸ್ಯಾಂಡಲ್‍ವುಡ್‍ನಲ್ಲಿ ಸ್ಟೈಲಿಶ್ ನಿರ್ದೇಶಕನೆಂದೇ ಬಿಂಬಿಸಿಕೊಂಡಿರುವ ಇಂದ್ರಜಿತ್ ಲಂಕೇಶ್ ಅವರು ಮಲೆಯಾಳಿನ ಸೆಕ್ಸೀ ನಟಿ ಶಕೀಲಾರ ಜೀವನಚರಿತ್ರೆಚಯನ್ನು ಬಿಂಬಿಸಲು ಹೊರಟಿದ್ದಾರೆ.  ಮಲೆಯಾಳಂ ಚಿತ್ರರಂಗದಲ್ಲಿ ಶಕೀಲಾ ಪಡ್ಡೆ ಹುಡುಗರ ಕಿಚ್ಚನ್ನು ಎಬ್ಬಿಸಿದ್ದರು. ಇವರ ಚಿತ್ರಗಳು ಬಿಡುಗಡೆ ಆಗುವ ಸಮಯದಲ್ಲಿ ಶ್ರೇಷ್ಟ ನಟರಾದ ಮಮ್ಮುಟಿ ಹಾಗೂ ಮೋಹನ್‍ಲಾಲ್‍ರ ಚಿತ್ರಗಳು ಬಿಡುಗಡೆ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದರು. ಶಕೀಲಾ ಅವರು ತೆಲುಗು, ತಮಿಳು, ಕನ್ನಡದಲ್ಲೂ ಕೂಡ ತಮ್ಮ ಮಿಂಚನ್ನು ಹರಿಸಿದ್ದರು. ಈಗಾಗಲೇ ಶಕೀಲಾರ ಜೀವನಚರಿತ್ರೆಯ ಚಿತ್ರದ ಶೇ. 65 ರಷ್ಟು ಚಿತ್ರೀಕರಣವು ಬೆಂಗಳೂರು, ತೀರ್ಥಹಳ್ಳಿ ನಡೆದಿದ್ದುಘಿ, ಮೊನ್ನೆ ಚಿತ್ರತಂಡವು ಪತ್ರಿಕಾಗೋಷ್ಠಿಯನ್ನು ಆಯೋಜಿಸಿತ್ತು.

ನಿರ್ದೇಶಕ ಇಂದ್ರಜಿತ್ ಮಾತನಾಡಿ, ಶಕೀಲಾರ ಜೀವನಚರಿತ್ರೆ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಾಗ ನಾನು ತುಂಬಾ ಥ್ರಿಲ್ಲಾಗಿದ್ದೆ, ನನ್ನೊಂದಿಗೆ ಇಲ್ಲಿಂದ ಛಾಯಗ್ರಾಹಕ ಸಂತೋಷ್ ರೈ ಪಾತಾಜೆ, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸೇರಿ ಕೆಲ ಕನ್ನಡ ತಂತ್ರಜ್ಞರುಗಳನ್ನು ಕರೆದುಕೊಂಡು ಹೋಗುತ್ತಿರುವೆ. ಇದು ಪೂರ್ಣ ಪ್ರಮಾಣದ ಹಿಂದಿ ಚಿತ್ರ.

ಈ ಹಿಂದೆ ಸಿಲ್ಕ್‍ಸ್ಮಿತಾ ಕುರಿತು ಡರ್ಟಿಪಿಕ್ಚರ್ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಅದು ಅವರ ಸಂಪೂರ್ಣ ವನಕಥೆಯಾಗಿರಲಿಲ್ಲ, ಬದಲಿಗೆ ಅವರ ಹೆಸರನ್ನು ಬಳಸಿಕೊಂಡಿದ್ದರು, ಆದರೆ ಶಕೀಲಾ ಅವರು ಕೇವಲ ಮಾದಕ ನಟಿಯಾಗಿ ಅಲ್ಲದೆ ತಮ್ಮ ನಟನೆಯಿಂದಲೂ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದರು. ಒಂದೇ ದಿನದಲ್ಲಿ 5-6 ಚಿತ್ರಗಳಲ್ಲಿ ನಟಿಸುತ್ತಿದ್ದ ಶಕೀಲಾ ಅವರು ವರ್ಷಕ್ಕೆ 170 ಕ್ಕೂ ಹೆಚ್ಚು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಪುರುಷ ಪ್ರಧಾನವಾಗಿದ್ದ ಚಿತ್ರರಂಗದಲ್ಲಿ ಶಕೀಲಾ ಹೇಗೆ ಮಿಂಚಿದರು, ಆರಂಭದಲ್ಲಿ ಅವರು ಯಾವ ರೀತಿ ಕಷ್ಟ ಅನುಭವಿಸಿದ್ರು ಎಂಬುದೇ ಅಲ್ಲದೆ ಅವರ ಬಾಲ್ಯ, ಯೌವ್ವನ, ಕುಟುಂಬ ಹೀಗೆ ಇಡೀ ಮಾಹಿತಿಯನ್ನು ಶಕೀಲಾ ಅವರಿಂದಲೇ ಸಂಗ್ರಹಿಸಿದ್ದೇಅಲ್ಲದೆ ಚಿತ್ರೀಕರಣಕ್ಕೂ ಅವರು ಕರೆಸಿ ಸಲಹೆಗಳನ್ನು ಪಡೆದಿದ್ದೇವೆ ಎಂದರು.

 

ಬಾಲಿವುಡ್ ನಟಿ ರಿಚಾ ಚಡ್ಡಾ ಮಾತನಾಡಿ ನಾನು ಅವರಂತೆಯೇ ನಟಿಸಲು ಪ್ರಯತ್ನ ಮಾಡುತ್ತಿರುವೆ. ಎರಡು ಬಾರಿ ಅವರನ್ನು ಭೇಟಿ ಮಾಡಿ ಗಿ ಕೆಲವೊಂದು ಟಿಪ್ಸ್‍ಗಳನ್ನು ತೆಗೆದುಕೊಂಡಿದ್ದೇನೆ. ಭಾರತದಲ್ಲಿ ಕಷ್ಟವಾದ ಭಾಷೆ ಎಂದರೆ ಮಲೆಯಾಳಂ

ಎಂದು ಹೇಳಿದರು. ಕನ್ನಡತಿ ಎಸ್ತರ್ ನರೋನ, ಕೇರಳ ಚಿತ್ರರಂಗದ ರಾಜೀವ್, ಹಿಂದಿಯ ಪಂಕಜ್ ತ್ರಿಪಾಠಿ, ಶೀವಾ ಎಲ್ಲರೂ ಚಿಕ್ಕದಾಗಿ ಮಾತನಾಡಿದರು. ಮ್ಯಾಜಿಕ್ ಸಿನಿಮಾ ಚಿತ್ರದ ನಿರ್ಮಾಣದ ಜವಬ್ದಾರಿಯನ್ನು ಹೊತ್ತುಕೊಂಡಿದೆ.  ಬಾಲಿವುಡ್‍ನಲ್ಲಿ ಶಕೀಲಾರ ಜೀವನಚರಿತ್ರೆಯನ್ನು ಬಿಂಬಿಸಲು ಹೊರಟಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಆ ಚಿತ್ರರಂಗದಲ್ಲೂ ಮತ್ತಷ್ಟು ಚಿತ್ರಗಳನ್ನು ನಿರ್ದೇಶಿಸುವ ಅವಕಾಶಗಳು ಲಭಿಸುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!