ರಜನಿ ಚಿತ್ರದಲ್ಲಿ ಶಿವಣ್ಣ ವಿಲನ್ ?

ಅಣ್ಣಾತ್ತೆ ಚಿತ್ರದ ವೈಫಲ್ಯದ ನಂತರ ರಜಿನಿಕಾಂತ್ ಅವರು ಜೈಲರ್ ಸಿನಿಮಾದ ಮೂಲಕ ತೆರೆಯ ಮೇಲೆ ಕಾಣಿಸಲು ತಯಾರಾಗಿದ್ದು, ಶಿವರಾಜ್ ಕುಮಾರ್ ವಿಲನ್ ಆಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ನೆಲ್ಸನ್ ನಿರ್ದೇಶನದ ಜೈಲರ್ ಸಿನಿಮಾದಲ್ಲಿ ಒಟ್ಟು 4 ನಾಯಕಿಯರು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜೈಲರ್ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಿಸಿದೆ. ಮಾಸ್ಟರ್ ಅನಿರುದ್ಧ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ಜೈಲರ್ ಘೋಷಣೆ ಮಾಡಲಾಗಿತ್ತಾದರೂ ಈಗ ಚಿತ್ರದ ಶೂಟಿಂಗ್ ಶುರುವಾಗಿದೆ. ಆಗಸ್ಟ್ 10 ರಂದು ಶೂಟಿಂಗ್ ಶುರುವಾಗಿದ್ದು, ಆಗಸ್ಟ್ 22 ರಂದು ರಜಿನಿ ಶೂಟಿಂಗ್‌ನಲ್ಲಿ ಭಾಗವಹಿಸಲಿದ್ದಾರೆ.

ರಜಿನಿಕಾಂತ್ ಜೊತೆ ನಟಿಸಲು ರಮ್ಯಾ ಕೃಷ್ಣನ್ ಸಹಿ ಹಾಕಿದ್ದಾರೆ. ಪ್ರಿಯಾಂಕಾ ಮೋಹನ್ ಮತ್ತು ಐಶ್ವರ್ಯ ರೈ ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ. ಮತ್ತೊಬ್ಬ ನಾಯಕಿಯಾಗಿ ತಮನ್ನಾ ಈ ಸಿನಿಮಾಗೆ ಸೇರ್ಪಡೆಯಾಗಿದ್ದಾರೆ.

ತಮನ್ನಾ ಈಗಾಗಲೇ ವಿಜಯ್ ಮತ್ತು ಅಜಿತ್ ಜೊತೆ ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಬಾರಿಗೆ ರಜಿನಿ ಜೊತೆ ನಟಿಸಲಿದ್ದಾರೆ.

_________

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!