‘ಗತವೈಭವ’ಕ್ಕೆ ಆಶಿಕಾ ಹೀರೋಯಿನ್

ಯುವನಟ ದುಷ್ಯಂತ್‌ ಅವರ ಚೊಚ್ಚಲ ಸಿನಿಮಾ ‘ಗತವೈಭವ’ಕ್ಕೆ ಆಶಿಕಾ ರಂಗನಾಥ್ ನಾಯಕ ನಟಿಯಾಗಿ ಆಯ್ಕೆಯಾಗಿದ್ದಾರೆ.

ಸಿಂಪಲ್ ಸುನಿ ನಿರ್ದೇಶನದ ಈ ಚಿತ್ರಕ್ಕೆ ನಾಯಕಿಯಾಗಿ ಆಶಿಕಾ ರಂಗನಾಥ್ ಆಯ್ಕೆಯಾಗಿರುವ ಸುದ್ದಿ ಬಂದಿದೆ. ನಾಯಕಿಯನ್ನು ಪರಿಚಯಿಸುವ ವಿಡಿಯೋ, ಸೋಷಿಯಲ್ ಮೀಡಿಯಾದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ.

‘ಗತವೈಭವ’ ಒಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದೆ ಇಲ್ಲಿ ಫ್ಯಾಂಟಸಿ ಅಂಶಗಳೂ ಇವೆಯಂತೆ. ಆಶಿಕಾ ಈ ಚಿತ್ರದಲ್ಲಿ ದೇವಕನ್ಯೆ ಮತ್ತು ಪೋರ್ಚುಗೀಸ್ ಯುವತಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ.

ಮೇ ತಿಂಗಳಲ್ಲಿ ತೆರೆಕಂಡಿದ್ದ ಸುನಿ ನಿರ್ದೇಶನದ ‘ಅವತಾರ ಪುರುಷ’ದಲ್ಲೂ ಆಶಿಕಾ ನಾಯಕಿಯಾಗಿದ್ದರು. ಇದೀಗ ಯುವನಟ ದುಷ್ಯಂತ್‌ ಅವರ ಚೊಚ್ಚಲ ಸಿನಿಮಾ ‘ಗತವೈಭವ’ಕ್ಕೂ ಆಶಿಕಾ ಜೋಡಿಯಾಗಿದ್ದಾರೆ. ಫ್ಯಾಂಟಸಿ ರೊಮ್ಯಾಂಟಿಕ್‌ ಕಾಮಿಡಿ ಕಥಾಹಂದರದ ಈ ಸಿನಿಮಾದಲ್ಲಿ ವಿಎಫ್‌ಎಕ್ಸ್‌ ಕಲಾವಿದನ ಪಾತ್ರದಲ್ಲಿ ದುಷ್ಯಂತ್‌ ಕಾಣಿಸಿಕೊಳ್ಳುತ್ತಿದ್ದಾರೆ.

ಆಶಿಕಾ ಶೇಕಡ 30ರಷ್ಟು ಚಿತ್ರೀಕರಣ ಈಗಾಗಲೇ ಮುಗಿಸಿದ್ದಾರೆ. ಸುನಿ ನಿರ್ದೇಶನದ ಜತೆಗೆ ಕಥೆ-ಚಿತ್ರಕಥೆ ಮತ್ತು ಸಂಭಾಷಣೆಯನ್ನೂ ಬರೆದಿದ್ದಾರೆ. ದೀಪಕ್ ಜತೆಗೆ ಸೇರಿ ಸುನಿ ಸಿನಿಮಾಸ್ ಸಂಸ್ಥೆಯಡಿ ಚಿತ್ರವನ್ನೂ ನಿರ್ವಿುಸುತ್ತಿದ್ದಾರೆ. ‘ವಿಕ್ರಾಂತ್ ರೋಣ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ವಿಲಿಯಂ ಡೇವಿಡ್ ಛಾಯಾಗ್ರಹಣ ಮತ್ತು ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!