ಆಲ್ಫಾ ಶೂಟಿಂಗ್ ಕಂಪ್ಲೀಟ್

ಚಿರಂತ ನಟನೆಯ ‘ಆಲ್ಫಾ’ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ. ಚಿತ್ರ ಸೆಪ್ಟೆಂಬರ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

ಶ್ರೀಧರ್ಮಶಾಸ್ತ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಬೆಂಗಳೂರು, ಹಾಸನ, ಸಕಲೇಶಪುರ, ಕುಂದಾಪುರ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಸದ್ಯದಲ್ಲೇ ಚಿತ್ರದ ಮೊದಲ ಪ್ರತಿ ಸಿದ್ಧವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿರಂತ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೂಲತಃ ಬಾಕ್ಸರ್ ಆಗಿರುವ ಚಿರಂತ ಅವರಿಗೆ ‘ಆಲ್ಫಾ’ ಮೊದಲ ಚಿತ್ರ. ನಾಯಕನಾಗಿ ಕಾಣಿಸಿಕೊಂಡಿರುವ ಚಿರಂತ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಕೂಡ ಅವರದೇ. ಸಿಂಧೂಜ ಈ ಚಿತ್ರದ ನಾಯಕಿ. ಜಗದೀಶ್, ರವಿಚಂದ್ರ ವಿಲನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

‘ಆಲ್ಫಾ’ ಎಂದರೆ ಗ್ರೀಕ್ ಭಾಷೆಯಲ್ಲಿ ನಂಬರ್ ಒನ್ ಎಂದು ನಾಯಕ ಚಿರಂತ ಚಿತ್ರದ ಟೈಟಲ್ ನ ಅರ್ಥ ತಿಳಿಸಿದ್ದಾರೆ.

ಚಿತ್ರಕ್ಕೆ ಅಜ್ಮಲ್ ಖಾನ್ ಛಾಯಾಗ್ರಹಣ, ವಿನ್ಸನ್ ಅಭಿಷೇಕ್ ಸಂಗೀತ ನಿರ್ದೇಶನ, ಸುಜೇಂದ್ರ ಎನ್ ಮೂರ್ತಿ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಇದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!