ಮಾನ್ಸೂನ್ ರಾಗದ ಹಾಡು ರಿಲೀಸ್

ಡಾಲಿ ಧನಂಜಯ ನಟನೆಯ ಮಾನ್ಸೂನ್ ರಾಗ ಚಿತ್ರದ “ಮುದ್ದಾದ ಮೂತಿ” ಹಾಡು ಯೂ ಟ್ಯೂಬ್ ನಲ್ಲಿ ರಿಲೀಸ್ ಆಗಿದೆ.

ಪ್ರಮೋದ್ ಮರವಂತೆ ಸಾಹಿತ್ಯದ ಈ ಹಾಡನ್ನು ವಾಸುಕಿ ವೈಭವ್ ಹಾಡಿದ್ದಾರೆ. ಹಾಡಿಗೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಹಾಡಿನಲ್ಲಿ ಅಚ್ಚುತ್ ಕುಮಾರ್ ಕಾಣಿಸಿಕೊಂಡಿದ್ದು, ಭಿನ್ನತೆ ಕಾಣಿಸುತ್ತಿದೆ.

ಡಾಲಿ ಧನಂಜಯ್ ಮತ್ತು ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ಚಿತ್ರತಂಡ ಆಗಸ್ಟ್ 19ರಂದು ಚಿತ್ರಮಂದಿರಕ್ಕೆ ಬರುವುದಾಗಿ ಅಧಿಕೃತ ಘೋಷಣೆ ಮಾಡಿದೆ.
ಸಾಕಷ್ಟು ತಿಂಗಳ ಹಿಂದೆ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇತ್ತೀಚೆಗಷ್ಟೇ ಧನಂಜಯ್ ಅವರನ್ನು ‘ಬೈರಾಗಿ’ ಸಿನಿಮಾದಲ್ಲಿ ಕಣ್ತುಂಬಿಕೊಂಡಿದ್ದ ಫ್ಯಾನ್ಸ್, ಈಗ ‘ಮಾನ್ಸೂನ್ ರಾಗ’ದ ಮೂಲಕ ಮತ್ತೊಮ್ಮೆ ಅವರನ್ನು ನೋಡಬಹುದಾಗಿದೆ. ಸಿನಿಮಾ ರಿಲೀಸ್‌ಗೆ ಸಾಕಷ್ಟು ದಿನ ಬಾಕಿ ಇರುವಾಗಲೇ ಚಿತ್ರಮಂದಿರಗಳಲ್ಲಿ ‘ಮಾನ್ಸೂನ್ ರಾಗ’ ಚಿತ್ರದ ಕಟೌಟ್‌ಗಳನ್ನು ಹಾಕಲಾಗಿದೆ.

ಮಾಸ್‌ ಮತ್ತು ಕ್ಲಾಸ್ ಸಿನಿಮಾ ಇದಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಈ ಸಿನಿಮಾ 70-80ರ ದಶಕದಲ್ಲಿ ಕರಾವಳಿ ಭಾಗದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಸಿನಿಮಾವನ್ನು ರವೀಂದ್ರನಾಥ್ ನಿರ್ದೇಶನ ಮಾಡಿದ್ದು, ಎ.ಆರ್. ವಿಖ್ಯಾತ್ ನಿರ್ಮಾಣ ಮಾಡಿದ್ದಾರೆ. ಸಂಭಾಷಣೆಯನ್ನು ಗುರು ಕಶ್ಯಪ್ ಬರೆದಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!