ರಾಕಿಂಗ್ ಸ್ಟಾರ್ ಯಶ್ ಹೊಸ ಚಿತ್ರ ಘೋಷಣೆ

ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಚಿತ್ರದ ಬಗ್ಗೆ ಮಾಹಿತಿ ಲಭಿಸಿದೆ. ನಿರ್ದೇಶಕ ನರ್ತನ್ ಅವರು ಯಶ್‌ ಅವರ ಹೊಸ ಚಿತ್ರ ನಿರ್ದೇಶನ ಮಾಡಲಿದ್ದಾರೆ.

ಯಶ್ ಅವರ 19ನೇ ಸಿನಿಮಾದ ಬಗ್ಗೆ ಮಾತುಕತೆ, ಒಪ್ಪಂದ ಎಲ್ಲವೂ ಮುಗಿದಿದೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಾಹಿತಿ ನೀಡಿರುವ ನಿರ್ದೇಶಕ ನರ್ತನ್, “ನಿಮ್ಮನ್ನು ಸೆಟ್‌ನಲ್ಲಿ ನೋಡಲು ಕಾತರನಾಗಿದ್ದೇನೆ. ಯಶ್‌ ನಟನೆಯ 19 ನೇ ಸಿನಿಮಾ ‘ಯಶ್19’ ಟೀಸರ್ ಮುಂದಿನ ವರ್ಷ ಜನವರಿ 8ರಂದು ಯಶ್ ಹುಟ್ಟುಹಬ್ಬದಂದು ಬಿಡುಗಡೆ ಆಗಲಿದೆ” ಎಂದು ಹೇಳಿದ್ದಾರೆ.

ಕೆಜಿಎಫ್‌ ಚಿತ್ರದ ಬಳಿಕ ಯಶ್ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಕೆಜಿಎಫ್ ಶೂಟಿಂಗ್ ಮುನ್ನ ‘ಕಿರಾತಕ 2’ ಸಿನಿಮಾ ಮಾಡಲು ಒಪ್ಪಿಕೊಂಡಿದ್ದರಾದರೂ ಬಳಿಕ ಅದರಿಂದ ಹಿಂದೆ ಸರಿದಿದ್ದರು. ಆ ಸಿನಿಮಾಕ್ಕೆ ಪಡೆದಿದ್ದ ಅಡ್ವಾನ್ಸ್ ಹಣವನ್ನು ನಿರ್ಮಾಪಕರಿಗೆ ವಾಪಸ್ ನೀಡಿದ್ದರು.

ಯಶ್ ನಟನೆಯ ‘ಕೆಜಿಎಫ್ 2 ‘ ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸಿನಿಮಾ ಏಪ್ರಿಲ್ 14ರಂದು ಬಿಡುಗಡೆ ಆಗಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದ ಬಗ್ಗೆ ಭಾರಿ ನಿರೀಕ್ಷೆ ಹೊಂದಲಾಗಿದೆ.
ಬಾಲಿವುಡ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಪ್ರಕಾಶ್​ ರೈ ಈ ಚಿತ್ರದಲ್ಲಿ ನಟಿಸಿರುವುದು ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ.
ಸಂಜಯ್ ದತ್ ಕೆಲದಿನಗಳ ಹಿಂದೆ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಪೂರ್ಣಗೊಳಿಸಿದ್ದರು. ಚಿತ್ರದ ಕೊನೆಯ ಹಂತದ ಪ್ಯಾಚ್ ಅಪ್ ಶೂಟಿಂಗ್ ಇನ್ನಷ್ಟೇ ನಡೆಯಬೇಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!