ಡಿ.9ಕ್ಕೆ ‘ಬಡವ ರಾಸ್ಕಲ್’ ಟ್ರೈಲರ್ ಔಟ್

ಡಾಲಿ ಧನಂಜಯ ನಟನೆಯ ‘ಬಡವ ರಾಸ್ಕಲ್’ ಚಿತ್ರದ ಟ್ರೈಲರ್ ಡಿಸೆಂಬರ್ 9 ರಂದು ಮಧ್ಯಾಹ್ನ 12.20ಕ್ಕೆ ಬಿಡುಗಡೆಯಾಗಲಿದೆ.

ಈ ಬಗ್ಗೆ ನಟ ಧನಂಜಯ್ ಅವರು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಚಿತ್ರ ಡಿಸೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಈಗಾಗಲೇ ಚಿತ್ರದ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ಶಾಲಾ ಮಕ್ಕಳಿಂದ ಹಿಡಿದು ತರಕಾರಿ ಅಂಗಡಿ, ಮಾಂಸದ ಅಂಗಡಿ, ದಿನಸಿ ಅಂಗಡಿ, ಆಸ್ಪತ್ರೆ ರಶೀದಿ ಚೀಟಿ, ಎಳನೀರು ಗಾಡಿ, ಕಾರು ಗ್ಯಾರೇಜ್, ಬಿರಿಯಾನಿ ಹೋಟೆಲ್‌, ಆಟೋ ಸೇರಿದಂತೆ ಎಲ್ಲೆಂದರಲ್ಲಿ ‘ಬಡವ ರಾಸ್ಕಲ್‌’ ಪ್ರೊಮೋಷನ್ಸ್‌ ನಡೆಯುತ್ತಿದೆ. ‘ಡಿ.24ಕ್ಕೆ ಬಡವ ರಾಸ್ಕಲ್‌’ ಎನ್ನುವ ಸ್ಲೇಟ್‌ ಫಲಕ ಎಲ್ಲೆಡೆ ಕಂಡು ಬಂದಿದೆ.

ಈ ಚಿತ್ರದಲ್ಲಿ ‘ಮಠ’ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್‌ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಸಂಗೀತ ಸಂಯೋಜಿಸಿದ್ದಾರೆ. ಡಾಲಿ ಧನಂಜಯ್ ಅವರು ಬಡವ ರಾಸ್ಕಲ್ ಚಿತ್ರಕ್ಕೆ ಲಿರಿಕ್ಸ್ ಬರೆಯುವ ಮೂಲಕವೂ ಗಮನ ಸೆಳೆದಿದ್ದಾರೆ. ಅವರು ಬರೆದಿರುವ “ಆಗಾಗ ನೆನಪಾಗುತ್ತಾಳೆ” ಹಾಡು ಜನರಿಂದ ಉತ್ತಮ ಪ್ರಶಂಸೆ ಪಡೆಯುತ್ತಿದೆ.

‘ಬಡವ ರಾಸ್ಕಲ್’ ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ, ವಿನೋದ್‌ ಸಾಹಸ ನಿರ್ದೇಶನವಿದೆ. ಅಪರಾಧ ಲೋಕದ ಕುರಿತ ಈ ಸಿನಿಮಾದಲ್ಲಿ ಅಮೃತ ಅಯ್ಯಂಗಾರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಚಿತ್ರವನ್ನ ಶಂಕರ್ ಗುರು ನಿರ್ದೇಶನ ಮಾಡಿದ್ದು , ಡಾಲಿ ಪಿಚ್ಚರ್ ಚಿತ್ರ ನಿರ್ಮಾಣ ಮಾಡಿದೆ.

ಧನಂಜಯ್ ಸದ್ಯ ಮಾನ್ಸೂನ್ ರಾಗ, ಹೆಡ್​ ಬುಷ್, ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
___

Be the first to comment

Leave a Reply

Your email address will not be published. Required fields are marked *

Translate »
error: Content is protected !!