ಫೋರ್ಬ್ಸ್ ಮುಖಪುಟದಲ್ಲಿ ಕಾಣಿಸಿಕೊಂಡ ಯಶ್

ನಟ ಯಶ್‌ ಪೋರ್ಬ್ಸ್ ಮ್ಯಾಗಜೀನ್‌ ಮುಖಪುಟದಲ್ಲಿ ಕಾಣಿಸಿಕೊಂಡು ದಾಖಲೆ ಮಾಡಿದ್ದಾರೆ. ಫೋರ್ಬ್ಸ್ ಮ್ಯಾಗಜೀನ್ ಮುಖಪುಟದಲ್ಲಿ ಕಾಣಿಸಿಕೊಂಡ ಕನ್ನಡ ಚಿತ್ರರಂಗದ ಮೊದಲ ನಟ ಎನ್ನುವ ಖ್ಯಾತಿಗೆ ಯಶ್ ಪಾತ್ರರಾಗಿದ್ದಾರೆ.
ಫೋರ್ಬ್ಸ್ ಮ್ಯಾಗಜೀನ್ ದಕ್ಷಿಣ ಭಾರತದ ಸಿನಿಮಾಗಳು, ಸಿನಿಮಾಗಳ ಕತೆಗಳ ಹೊಸ ಬದಲಾವಣೆ ಸೇರಿದಂತೆ ದಕ್ಷಿಣ ಭಾರತದ ಮನರಂಜನಾ ಕ್ಷೇತ್ರವನ್ನು ದೃಷ್ಟಿಯಲ್ಲಿಟ್ಟುಕೊಂಡು ವಿಶೇಷ ಸಂಚಿಕೆ ಹೊರ ತಂದಿದೆ. ದಕ್ಷಿಣ ಭಾರತ ಚಿತ್ರರಂಗದ ಪ್ರತಿನಿಧಿಯಾಗಿ ಯಶ್‌ ಅವರ ಪೋಟೋವನ್ನು ಮುಖಪುಟದಲ್ಲಿ ಮುದ್ರಿಸಲಾಗಿದೆ.

ಯಶ್‌ ಬಗ್ಗೆ ಫೋರ್ಬ್ಸ್ ಮುಖಪುಟ ಲೇಖನ ಪ್ರಕಟಿಸಿದೆ. ‘ಫೀಲ್ಡ್ಸ್ ಆಫ್ ಗೋಲ್ಡ್’ ಎನ್ನುವ ಹೆಡ್‌ಲೈನ್ ನೀಡಲಾಗಿದೆ. ಮೈಸೂರಿನಿಂದ ಬೆಂಗಳೂರಿಗೆ ಬಂದ ಪ್ಯಾನ್‌ ಇಂಡಿಯಾ ನಟ ಯಶ್‌ ಅವರ ಜೀವನ ಪಯಣ, ಎದುರಿಸಿದ ಅಡೆ-ತಡೆಗಳು, ‘ಕೆಜಿಎಫ್’ ತಂದ ಬದಲಾವಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಪೋರ್ಬ್ಸ್‌ಗಾಗಿ ಯಶ್ ‘ಕೆಜಿಎಫ್’ ಮಾದರಿಯಲ್ಲಿ ಗಡ್ಡ ಬಿಟ್ಟು, ಸ್ಟೈಲ್ ಆಗಿ ಪೋಸ್ ನೀಡಿದ್ದಾರೆ. ಗಂಭೀರವಾಗಿ ನೋಡುತ್ತಿರುವ ಯಶ್‌ ಕಣ್ಣಿಗೆ ಹಾಕಿಕೊಂಡಿರುವ ಕನ್ನಡಕ ರಗಡ್, ಕಾರ್ಪೊರೇಟ್ ಲುಕ್ ನೀಡುವಂತೆ ಕಾಣುತ್ತಿದೆ.
ಯಶ್ ಅಭಿನಯದ ‘ಕೆಜಿಎಫ್ 2’ ಸಿನಿಮಾ ಮುಂದಿನ ವರ್ಷದ ಏಪ್ರಿಲ್ 14ಕ್ಕೆ ಬಿಡುಗಡೆ ಆಗಲಿದೆ. ಸಧ್ಯ ಯಾವುದೇ ಸಿನಿಮಾಗಳನ್ನು ಯಶ್ ಒಪ್ಪಿಕೊಂಡಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!