ಕನ್ನಡ ಮತ್ತು ತಮಿಳು ಚಿತ್ರರಂಗದ ಸಿನಿಮಾ ಹಾಡುಗಳ ಬಗ್ಗೆ ಸಂಶೋಧನೆ ನಡೆಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ ಎಚ್ ಡಿ ಪದವಿ ಪಡೆದ ಬಹುಭಾಷಾ ಗಾಯಕಿ ಪ್ರಿಯದರ್ಶನಿ ಅವರನ್ನು ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಸನ್ಮಾನಿಸಿದರು.
ತಮ್ಮ ಕಚೇರಿಯಲ್ಲಿ ಪ್ರಿಯದರ್ಶಿನಿ ಅವರನ್ನು ಸನ್ಮಾನಿಸಿ ಮಾತನಾಡಿದ ಸುನಿಲ್ ಪುರಾಣಿಕ್ ಅವರು, ಚಿಕ್ಕ ವಯಸ್ಸಿನಲ್ಲಿ ಪ್ರಿಯದರ್ಶಿನಿ ಅವರು ಚಲನಚಿತ್ರ ಗೀತೆಗಳ ಬಗ್ಗೆ ಸಂಶೋಧನೆ ಮಾಡಿರುವುದು ತುಂಬಾ ಖುಷಿಯ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಚಲನಚಿತ್ರ ಅಕಾಡೆಮಿಯ ಮೂಲಕ ಕಾರ್ಯಕ್ರಮ ಆಯೋಜಿಸಿ ಪ್ರಿಯದರ್ಶಿನಿ ಅವರನ್ನು ಸನ್ಮಾನ ಮಾಡಲಾಗುವುದು. ಪ್ರಿಯದರ್ಶಿನಿ ಅವರ ಸಾಧನೆಯ ಬಗ್ಗೆ ಸಿಎಂ ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಹೇಮಂತ್ ರಾಜು, ಸಂಗೀತ ನಿರ್ದೇಶಕ ಮಹೇಶ್ ಮಹಾದೇವ ಅವರು ಇದ್ದರು.
ಪ್ರಿಯದರ್ಶಿನಿ ಅವರು ಸಂಶೋಧನೆ ಮಾಡಿ ಮಂಡಿಸಿದ ” ಮ್ಯೂಸಿಕ್ ಇನ್ ಕನ್ನಡ ಆಂಡ್ ತಮಿಳ್ ಸಿನಿಮಾ: ಎ ಸ್ಟಡಿ ” ಮಹಾಪ್ರಬಂಧಕ್ಕೆ ಮೈಸೂರು ವಿಶ್ವವಿದ್ಯಾನಿಲಯ ಎಚ್ ಡಿ ಪದವಿ ಪ್ರದಾನ ಮಾಡಿದೆ. 1080 ಪುಟಗಳ ಈ ಮಹಾಪ್ರಬಂಧದಲ್ಲಿ ಮೂಕಿ ಚಿತ್ರಗಳ ಕಾಲದ ಸಂಗೀತ, ಸಿನಿಮಾ ಸಂಗೀತದಲ್ಲಿ ಪಾಶ್ಚಿಮಾತ್ಯ ಪ್ರಭಾವ ಮೊದಲಾದ ವಿಷಯಗಳ ಬಗ್ಗೆ ವಿವರವಾಗಿ ತಿಳಿಸಲಾಗಿದೆ. ಪ್ರಿಯದರ್ಶಿನಿ ಅವರು ಎ ಆರ್ ರೆಹಮಾನ್, ಇಳೆಯರಾಜ, ವಿ. ಮನೋಹರ್, ಎಸ್ ಪಿ ಬಾಲಸುಬ್ರಹ್ಮಣ್ಯಂ ಸೇರಿದಂತೆ 150ಕ್ಕೂ ಹೆಚ್ಚು ಸಂಗೀತ ಕ್ಷೇತ್ರದ ದಿಗ್ಗಜರ ಸಂದರ್ಶನ ಮಾಡಿ ಈ ಮಹಾಪ್ರಬಂಧವನ್ನು ರಚಿಸಿದ್ದಾರೆ.
Be the first to comment