ಮೊಗ್ಗಿನ ಮನಸ್ಸಿನ ಶುಭಾ ಪೂಂಜಾ ಅಭಿನಯದ ‘3ದೇವಿ’ ಸಿನಿಮಾ ಮೇ 24 ರಂದು ರಿಲೀಸ್ ಆಗುತ್ತಿದೆ.
3ದೇವಿ ಟೈಟಲ್ ಹೇಳುವಂತೆ ಚಿತ್ರದಲ್ಲಿ ಶುಭಾ ಪೂಂಜಾ ಸೇರಿ 3 ಜನ ಹೀರೋಯಿನ್ ಇದ್ದಾರೆ. ಸಂದ್ಯಾ ಲಕ್ಷ್ಮಿನಾರಾಯಣ್, ಜ್ಯೋತ್ಸ್ನಾ ಬಿ.ರಾವ್ ಮತ್ತೊಬ್ಬರು. ಈ ಮೂವರು ನಾಯಕಿಯರು ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಮಾಡಿದ್ದಾರೆ.
ಕಳೆದ ಎರಡು ವರ್ಷದ ಹಿಂದೆ ಚಿತ್ರದ ಒಂದು ಟ್ರೈಲರ್ ರಿಲೀಸ್ ಆಗಿತ್ತು. ಮೂವರು ಹುಡುಗಿಯರು ಎಲ್ಲವನ್ನೂ ಬಿಟ್ಟು ಕಾಡಿಗೆ ಹೋಗೋ ಒಂದು ಕಥೆ ಇದಾಗಿತ್ತು. ಇಲ್ಲಿ ಹೆಣ್ಣು ಹುಲಿಯ ಆತ್ಮ ಸುಳಿದಾಡುತ್ತಲೇ ಎಲ್ಲರಿಗೂ ಸರಿಯಾಗಿ ದಾರಿ ತೋರುತ್ತದೆ. ಹೀಗೊಂದು ಕಥೆ ಹೇಳುವ ಕಾಡು ಮನುಷ್ಯನಿಂದಲೇ ಶುರು ಆಗೋ ಈ ಟ್ರೈಲರ್‌ನಲ್ಲಿ ಶುಭಾ ಪೂಂಜಾ ದೇವಿ ರೂಪದಲ್ಲಿಯೇ ಅಭಿನಯಿಸಿದ್ದಾರೆ. ಇನ್ನಿಬ್ಬರು ಹುಡುಗಿಯರು ಶಕ್ತಿದೇವಿಯನ್ನ ಕಾಪಾಡೋ ವಾರಿಯರ್ ರೀತಿ ಕಾಣಿಸುತ್ತಾರೆ.

ಅಶ್ವಿನ್ ಎ. ಮ್ಯಾಥ್ಯೂ ಈ ಸಿನಿಮಾವನ್ನ ಕಥೆ-ಚಿತ್ರಕಥೆ ಬರೆದುಕೊಂಡು ಡೈರೆಕ್ಷನ್ ಮಾಡಿದ್ದಾರೆ. ಚಿತ್ರ ರಿಲೀಸ್ ಆಗುವ ಮೊದಲು ಹೊಸ ಟ್ರೈಲರ್ ಕೂಡ ಬರಲಿದೆ. ಈ ಚಿತ್ರದ ಮೂಲಕ ಶುಭಾ ಪುಂಜಾ ಮೊದಲ ಬಾರಿಗೆ ಪ್ರೊಡ್ಯೂಸರ್ ಆಗಿದ್ದಾರೆ.
ಸಿನಿಮಾದ ಹಾಡೊಂದಕ್ಕೆ ಮೂವರು ನಟಿಯರು ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಶುಭಾ ಪೂಂಜಾ ತಮ್ಮ ಸೋಷಿಯಲ್ ಮೀಡಿಯಾ ಪೇಜ್‌ನಲ್ಲೂ ಹಂಚಿಕೊಂಡಿದ್ದಾರೆ.
—–





Be the first to comment