ಡಿ ಎಸ್ ಕೆ ಸಿನಿಮಾಸ್ ಮತ್ತು ಎಸ್ ಪಿ ಪಿಕ್ಚರ್ಸ್ ಚಿತ್ರ ಸಂಸ್ಥೆಯಿಂದ ಹೊರ ತಂದ ‘ ದೇವ ನೀನು ‘ ಅಲ್ಬಮ್ ಸಾಂಗ್ 10 ಲಕ್ಷ ವೀಕ್ಷಣೆ ಪಡೆದ ಸಾಧನೆ ಮಾಡಿದೆ.
ಮಲೆನಾಡಿನ ಖ್ಯಾತ ಗಾಯಕ ಅರ್ಫಾರಾಜ್ ಉಳ್ಳಾಲ ಅವರ ಕಂಠಸಿರಿಯಲ್ಲಿ ಮೂಡಿ ಬಂದಿರುವ ವಿಡಿಯೋ ಸಾಂಗ್ 2021ರ ಜನವರಿ 5ರಂದು ಯೂ ಟ್ಯೂಬ್ ನಲ್ಲಿ ಬಿಡುಗಡೆ ಆಗಿತ್ತು. ಈಗ ಈ ಆಲ್ಬಂ 10 ಲಕ್ಷ ವೀಕ್ಷಣೆ ಪಡೆಯುವ ಜೊತೆಗೆ 18 ಸಾವಿರ ಲೈಕ್ ಪಡೆಯುವಲ್ಲಿ ಯಶಸ್ವಿಯಾಗಿದೆ.
ಪ್ಯಾತೋ ಮಾದರಿಯ ಈ ಹಾಡನ್ನು ಜುನೈದ್ ಬೆಳ್ತಂಗಡಿ ಬರೆದಿದ್ದಾರೆ. ಜಿ ಕೆ ಶಿವಾನಂದ ನಿರ್ದೇಶನದ ಈ ಆಲ್ಬಂನ್ನು ಶೈಲಜಾ ಪ್ರಕಾಶ್ ಹಾಗೂ ಸುನಿಲ್ ಕುಂಬಾರ್ ಅವರು ನಿರ್ಮಾಣ ಮಾಡಿದ್ದಾರೆ.
ಆಲ್ಬಂನಲ್ಲಿ ಸನ್ಮಿತ್ ವಿಹಾನ್, ಪೂಜಿತ ಬೋಬೇ ಗೌಡ, ಸುನಿಲ್ ಶೇಜ್ವಾಡ್ಕರ್ ಅವರು ನಟಿಸಿದ್ದಾರೆ.
ಭರತ್ ಇಂಡಿಯಾ ಡಿಒಪಿ, ಪ್ರಜ್ವಲ್ ಕೆ ಪಿ ಸಂಕಲನ, ಡಿ ಐ & ಕಲರಿಸ್ಟ್ ಗಗನ್ ಗೌಡ, ಮೇಕ್ ಓವರ್ ಪೂಜಾ ರತನ್ ಲಾಲ್ ಮಾಡಿದ್ದು ಪ್ರೊಡಕ್ಷನ್ ತಂಡದಲ್ಲಿ ಸಿದ್ದು ಶ್ರಡಹಳ್ಳಿ, ಅನಿಲ್, ಈರಪ್ಪ, ರವಿ ಕೆಲಸ ಮಾಡಿದ್ದಾರೆ. ಕಣ್ಣೂರಿನ ಕಿಂಗ್ಸ್ ಆಡಿಯೋ ಸ್ಟೇಷನ್ ನಲ್ಲಿ ಆಲ್ಬಂ ರೆಕಾರ್ಡಿಂಗ್ ಮಾಡಲಾಗಿದೆ.
ಆಲ್ಬಮ್ ಸಾಂಗ್ ಹತ್ತು ಲಕ್ಷ ವೀಕ್ಷಣೆ ಪಡೆದ ಬಗ್ಗೆ ತಂಡದ ಸದಸ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.
_____

Be the first to comment