ರೋರಿಂಗ್ ಸ್ಟಾರ್ ಶ್ರೀ ಮುರುಳಿ ಸಿನಿಮಾ ಜೀವನಕ್ಕೆ ಇದೀಗ 15 ವರ್ಷ. 2003 ರಲ್ಲಿ ‘ಚಂದ್ರಚಕೋರಿ’ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಕೊಟ್ಟ ಈ ನಟ ಮೊದಲ ಚಿತ್ರದಲ್ಲಿಯೇ ‘ಈ ಹುಡುಗ ಮುಂದೆಯೂ ಒಳ್ಳೆ ಸಿನಿಮಾ ಮಾಡಬಹುದು’ ಎಂದೆನಿಸಿಕೊಂಡರು .ಇನ್ನು ಇವರ 15 ವರ್ಷದ ಸಿನಿ ಪಯಣವನ್ನು, ವಿದ್ಯಾ ಶ್ರೀ ಮುರುಳಿಯವರು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿದ್ದಾರೆ. ತಮ್ಮದೇ ಆದ ಭಾಷೆಯಲ್ಲಿ ಪತಿಯ ಸಿನಿ ಪಯಣವನ್ನ ಬಿಚ್ಚಿಟ್ಟಿದ್ದಾರೆ.ಈ 15 ವರ್ಷಗಳ ಸಿನಿಮಾ ಜರ್ನಿ ಬಗ್ಗೆ ಶ್ರೀಮುರಳಿ ಪತ್ನಿ ವಿದ್ಯಾ ಫೇಸ್ ಬುಕ್ ನಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಶ್ರೀಮುರಳಿಯ ಸೋಲು-ಗೆಲುವಿನಲ್ಲಿ ಜೊತೆಯಾಗಿದ್ದ ನಿಮ್ಮಂತಹ ಅಭಿಮಾನಿಗಳಿಗೆ ವಿದ್ಯಾ ಶ್ರೀಮುರಳಿ ಧನ್ಯವಾದ ಅರ್ಪಿಸಿದ್ದಾರೆ.
Be the first to comment