ಶಿಕ್ಷಣ ಇಲಾಖೆಗೆ ಬಂತು ಪ್ರತ್ಯೇಕ ಸಂಗೀತ ಆಲ್ಬಮ್!

ಬೆಂಗಳೂರು: ಉದಯೋನ್ಮುಖ ಗಾಯಕ ಮತ್ತು ಸಂಗೀತ ನಿರ್ದೇಶಕ ಆಶಿಶ್ ಲಕ್ಕಿ ದುಬೆ ಅವರ ‘‘ಆಶಿಶ್-ಮ್ಯೂಸಿಕ್ ಫಾರ್ ಎ ಬ್ರೈಟರ್ ಉಷಾ ಎಂಬ ವಿನೂತನವಾದ ಆಲ್ಬಂ ನ್ನು ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ತನ್ನ ಇಲಾಖೆಯ ಆಲ್ಬಂ ಆಗಿ ಅಳವಡಿಸಿಕೊಂಡಿದ್ದು,ಇದನ್ನು ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆೆ ಉದ್ಘಾಟಿಸಿದರು.ಈ ಗೀತೆಯ ವೈಶಿಷ್ಟ್ಯತೆ ಮತ್ತು ಸೌಂದರ್ಯವೆಂದರೆ ಮಕ್ಕಳು ಕೇಂದ್ರಬಿಂದುವಾಗಿದ್ದಾರೆ.ಆಶಿಶ್ ದುಬೆ ಮತ್ತು ಗ್ರಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಅವರು ನಿರ್ಮಿಸಿರುವ ಐದು ಹಾಡುಗಳಿದ್ದು,ಇದರಲ್ಲಿ ಎರಡು ಕನ್ನಡ ಗೀತೆಗಳಿವೆ. ಮತ್ತೆ ಎರಡು ರೀಮಿಕ್ಸ್‌ ಮತ್ತು ಒಂದು ಹಾಡು ಇಂಗ್ಲೀಷ್ ಭಾಷೆಯದ್ದಾಗಿದೆ. ಈ ಗೀತೆಗಳು ಎಲ್ಲಾ ಡೌನ್‌ಲೋಡಿಂಗ್ ಮತ್ತು ಸ್ಟ್ರೀಮಿಂಗ್‌ ವೇದಿಕೆಗಳಲ್ಲಿ ಲಭ್ಯವಿವೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಆಲ್ಬಂ ಅನ್ನು ಶನಿವಾರ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಸಾಮಾಜಿಕ ಸಂದೇಶಗಳನ್ನು ಸಾರುವ ಮೂಲಕ ಮಕ್ಕಳು ರ‍್ಯಾಂಪ್ ವಾಕ್ ಮಾಡುವುದರೊಂದಿಗೆ ಸಮಾರಂಭಕ್ಕೆೆ ಮೆರಗು ತಂದರು. ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆೆ ಅವರು ಈ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕರ್ನಾಟಕ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಈ ಸಂದರ್ಭದಲ್ಲಿದ್ದರು. ವಿಶ್ವಸಂಸ್ಥೆೆಯ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು (ಎಸ್ ಡಿ ಜಿ) ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ. ಮಕ್ಕಳ ಶಿಕ್ಷಣದ ಹಕ್ಕು, ಆರೋಗ್ಯ, ಪರಿಸರ ರಕ್ಷಣೆ ಮತ್ತು ಹೆಣ್ಣು ಮಕ್ಕಳ
ಶಿಕ್ಷಣದ ಹಕ್ಕು, ನೈರ್ಮಲ್ಯ ಹಾಗೂ ಜೀವನ ಶೈಲಿಯ ಆರೋಗ್ಯ ಸೇರಿದಂತೆ ಒಟ್ಟಾರೆ ಮಕ್ಕಳ ಹಿತರಕ್ಷಣೆಗೆ ಪೂರಕವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಗೀತೆಗಳನ್ನು ರಚಿಸಲಾಗಿದೆ.

ಈ ಆಲ್ಬಂಗೆ ಕರ್ನಾಟಕ ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಹಕಾರ ನೀಡಿದೆ. ಅಲ್ಲದೇ, ಎಲ್ಲಾ ಸರಕಾರಿ ಕಾರ್ಯಕ್ರಮಗಳಲ್ಲಿ ಈ ಗೀತೆಗಳನ್ನು ಹಾಕಲಾಗುತ್ತದೆ ಮತ್ತು ಈ ಗೀತೆಗಳನ್ನು ಶಿಕ್ಷಣ ಇಲಾಖೆಯ ಅಲ್ಬಂ ಆಗಿ ಅಳವಡಿಸಿಕೊಂಡಿದೆ.

 

This Article Has 1 Comment
  1. Pingback: Richard Mille replica

Leave a Reply

Your email address will not be published. Required fields are marked *

Translate »
error: Content is protected !!