ಶತಕ ಸಂಭ್ರಮದಲ್ಲಿ ‘ಅಯೋಗ್ಯ’

ಇತ್ತೀಚೆಗೆ ಒಂದು ಚಿತ್ರ ಶತದಿನ ಪೂರೈಸುವುದು ಸುಲಭವಲ್ಲ. ಆದರೆ, ಕನ್ನಡದ ಅಯೋಗ್ಯ 100 ದಿನ ಪ್ರದರ್ಶನ ಕಾಣುವ ಮೂಲಕ ಸೆಂಚೂರಿ ಬಾರಿಸಿದೆ. ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಈ ಹಿಂದೆ ‘ಚಮಕ್’ ಸಿನಿಮಾದಲ್ಲೂ ಗೆಲುವು ಸಾದಿಸಿದ್ದರು. ‘ಅಯೋಗ್ಯ’ನಿಗೆ ಅರ್ಜುನ ಜನ್ಯ ಸಂಗೀತ, ಪ್ರೀತಮ್ ತೆಗ್ಗಿನ ಮನೆ ಛಾಯಾಗ್ರಹಣ, ಸುರೇಶ್ ಅರ್ಮೂಗಮ್ ಸಂಕಲನ ನಿರ್ವಹಿಸಿದ್ದಾರೆ. ರವಿಶಂಕರ್, ಶಿವರಾಜ್ ಕೆ.ಆರ್. ಪೇಟೆ, ಗಿರಿ, ಸಾಧು ಕೋಕಿಲ, ತಬಲಾ ನಾಣಿ, ಸುಂದರ್ ರಾಜ್, ಕುರಿ ಪ್ರತಾಪ್, ಅರುಣ ಬಾಲರಾಜ್, ನಿತನ್ಯ ಹಾಗೂ ಇತರರು ಅಭಿನಯಿಸಿದ್ದಾರೆ.

ಈ ವರ್ಷದಲ್ಲಿ ‘ಟಗರು’ 100 ದಿವಸದ ಸಂತೋಷವನ್ನು ಹಂಚಿಕೊಂಡಿದ್ದು ಬಿಟ್ಟರೆ ಯಾವ ಸಿನಿಮಾ ಸಹ 100ರ ಸಂಭ್ರಮಕ್ಕೆ ಮುಂದಾಗಲಿಲ್ಲ.  ಮುಂದಿನ ವಾರ ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ 100 ನೇ ದಿವಸ ತಲುಪಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!