ವಿಕಲಚೇತನನಿಗೆ ಊಟ ಬಡಿಸಿ ಸೆಲ್ಫಿ ಕ್ಲಿಕ್ಕಿಸಿದ ಸಾರಥಿ!

ಹೌದು, ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅವರದು ಸರಳ ಸಜ್ಜನಿಕೆಯ ವ್ಯಕ್ತಿತ್ವ. ದೊಡ್ಡ ಸ್ಟಾರ್​ ನಟನಾದ್ರೂ ಎಲ್ಲರ ಜತೆ ಆತ್ಮಿಯತೆಯಿಂದ ಬೇರೆಯುತ್ತಾರೆ. ಅದರಲ್ಲೂ ಸಮಸ್ಯೆಯೆಂದು ಹೇಳಿಕೊಂಡು ಬಂದವರಿಗೆ ಕರ್ಣನಂತೆ ಸಹಾಯ ಮಾಡ್ತಾರೆ. ಈಗಾಗಲೇ ಸಾಕಷ್ಟು ಸಾರಿ ಅವರ ಹೃದಯ ವೈಶಾಲ್ಯತೆ ಅನಾವರಣಗೊಂಡಿದೆ. ಮೊನ್ನೆಯಷ್ಟೆ ಹಿರಿಯ ನಟ ಶಂಕರ್ ಅಶ್ವತ್ ಅವರು ದರ್ಶನ್ ಅವರ ದೊಡ್ಡತನವನ್ನು ಕೊಂಡಾಡಿದ್ದರು. ಈಗ ಅದು ಮತ್ತೆ ರಿವೀಲ್​ ಆಗಿದೆ.
ಶುಕ್ರವಾರ ನಾಡದೇವತೆ ಚಾಮುಂಡೇಶ್ವರಿ ದೇವಿಯ ವರ್ಧಂತಿ ಉತ್ಸವದ ನಿಮಿತ್ತ ದರ್ಶನ್ ಫಾರಂ ಹೌಸ್​ನಲ್ಲಿ ವಿಶೇಷ ಪೂಜೆ ನಡೆಯಿತು. ಈ ವೇಳೆ ಅಚಾನಕ್​ ಆಗಿ ಅಲ್ಲಿಗೆ ಆಗಮಿಸಿದ ವಿಕಲಚೇತನನಿಗೆ ಆದರದ ಸ್ವಾಗತ ನೀಡಿದ್ದಾರೆ ದರ್ಶನ್​. ಆತನಿಗೆ ಊಟ ಬಡಿಸಿ, ಆತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಅವರ ಕಾರ್ಯವನ್ನು  ಅಭಿಮಾನಿಗಳು ತಮ್ಮ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದ್ದಾರೆ.
This Article Has 1 Comment
  1. Pingback: escort madrid

Leave a Reply

Your email address will not be published. Required fields are marked *

Translate »
error: Content is protected !!