‘ಮದುವೆ ಮಾಡಿ ಸರಿ ಹೋಗ್ತಾನೆ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ

ಮದುವೆ ಮಾಡಿ ಸರಿ ಹೋಗ್ತಾನೆ’ ಸಿನಿಮಾದ ಮೋಷನ್ ಪೋಸ್ಟರ್​ನ್ನು ಚಿತ್ರತಂಡ ಇಂದು‌ ಕೊಪ್ಪಳದಲ್ಲಿ ಬಿಡುಗಡೆ ಮಾಡಿದೆ.

ಎಸ್ಎಲ್ ಡಿ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿ ಶಿವರಾಜ ಎಲ್.ದೇಸಾಯಿ ಅವರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಇದು ಪಕ್ಕಾ ಕಮರ್ಷಿಲ್ ಚಿತ್ರವಾಗಿದ್ದು, ಮೊದಲ ಬಾರಿಗೆ ನಾಯಕ ನಟನಾಗಿ ಶಿವಚಂದ್ರಕುಮಾರ್ ಹಾಗೂ ನಾಯಕಿಯಾಗಿ ಆರಾಧ್ಯ ನಟಿಸಿದ್ದಾರೆ.

ಹಿರಿಯ ಕಲಾವಿದರಾದ ರಮೇಶ್ ಭಟ್, ಅರುಣ್ ಬಾಲರಾಜ, ಮಿಮಿಕ್ರಿ ಗೋಪಿ ಸೇರಿದಂತೆ ಉತ್ತರ ಕರ್ನಾಟಕದ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಹಾವೇರಿ, ಬಾಗಲಕೋಟೆ ಸೇರಿದಂತೆ ಅನೇಕ ಕಡೆ ಚಿತ್ರೀಕರಣ ಮಾಡಲಾಗಿದೆ. ಜನವರಿಯಲ್ಲಿ ಚಿತ್ರ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ವಿ. ನಾಗೇಂದ್ರ ಪ್ರಸಾದ್, ಕೆ. ಕಲ್ಯಾಣ್ ಅವರು ತಲಾ ಒಂದು ಹಾಡು ಬರೆದಿದ್ದಾರೆ. ಬಳ್ಳಾರಿ‌ ಮೂಲದ ಸಂಗೀತ ನಿರ್ದೇಶಕ ಅವಿನಾಶ‌ ಬಾಸುತ್ಕರ್, ಸುರೇಶಬಾಬು ಹಾಗೂ ರವಿರಾಜ್ ಹೊಂಬಳ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!