ಕಾರ್ತಿಕ್ ಸರಗೂರು ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಅರವಿಂದ್ ಅಯ್ಯರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕಾರ್ತಿಕ್ಗೆ ಕೂಡಾ ಇದು ಮೊದಲ ಸಿನಿಮಾ. ಇನ್ನು ಕಿರಿಕ್ ಪಾರ್ಟಿ ನಂತರ ಅರವಿಂದ್ ಅಯ್ಯರ್ ಕೂಡಾ ಭೀಮಸೇನ ನಳಮಹಾರಾಜ ಸಿನಿಮಾದಲ್ಲಿ ಒಂದು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ.

ಈಗಾಗಲೇ ಕೊಡಚಾದ್ರಿಯಲ್ಲಿ ಶೂಟಿಂಗ್ ಆರಂಭವಾಗಿದ್ದು ಇನ್ನೂ 10 ದಿನಗಳು ಅಲ್ಲೇ ಶೂಟಿಂಗ್ ಜರುಗಲಿದೆ. ಚಿತ್ರದ ಹಾಡುಗಳಿಗೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಇನ್ನು ಗಣಪ ಸಿನಿಮಾದಿಂದ ತಮ್ಮ ಸಿನಿಮಾ ಕರಿಯರ್ ಆರಂಭಿಸಿದ್ದ ಪ್ರಿಯಾಂಕ ತಿಮ್ಮೇಶ್ ನಿವಿಲ್ ಪೌಲಿ ಹಾಗೂ ಮೋಹನ್ ಲಾಲ್ ಜೊತೆ ಮಲಯಾಳಂ ಸಿನಿಮಾವೊಂದರಲ್ಲಿ ನಟಿಸಿದ್ದು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ.

Be the first to comment