ಫ್ಯಾನ್ – ಇದೇ ಶುಕ್ರವಾರ ಬಿಡುಗಡೆ

ದಿವಂಗತ ಶಂಕರ್ ನಾಗ್ ಅಭಿಮಾನಿಯೊಬ್ಬರ ಕುರಿತಾದ ಸಿನಿಮಾ `ಫ್ಯಾನ್’ ಚಿತ್ರ ಈ ವಾರ ತೆರೆಕಾಣುತ್ತಿದೆ. ಈ ಚಿತ್ರಕ್ಕಾಗಿ ಶಂಕರ್ ನಾಗ್ ಹುಟ್ಟಿದ ಊರು ಹೊನ್ನಾವರದಲ್ಲಿ ಸಹ ಚಿತ್ರೀಕರಣ ಶೇಖಡ 80 ರಷ್ಟು ಮಾಡಲಾಗಿದೆ.

ಎಸ್ ಎಲ್ ಎನ್ ಸಿನಿಮಾಸ್ ಅಡಿಯಲ್ಲಿ ಸವಿತ ಈಶ್ವರ್, ಶಶಿಕಿರಣ್ ಎಂ ಈ ನಿರ್ಮಾಣದ ಜೊತೆಗೆ ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು. ಅಭಿಮಾನಿಯ ಅಭಿಮಾನದ ಕಥೆ ಹೊಂದಿರುವ ಈ ಚಿತ್ರ ದರ್ಶಿತ್ ಭಟ್ ನಿರ್ದೇಶನದಲ್ಲಿ ಮೂಡಿಬಂದಿದೆ. ವಿಕ್ರಮ್ ಹಾಗೂ ಚಂದನ ದಂಪತಿಗಳು ಸಂಗೀತ ನೀಡಿರುವ ಈ ಚಿತ್ರಕ್ಕೆ ಹಿನ್ನಲೆ ಸಂಗೀತವನ್ನು ಅಜನೀಶ್ ಲೋಕನಾಥ್ ಒದಗಿಸಿದ್ದಾರೆ. ವಿ ಪವನ್ ಕುಮಾರ್ ಛಾಯಾಗ್ರಹಣ, ಗಣಪತಿ ಭಟ್ ಸಂಕಲನ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ದರ್ಶಿತ್ ಭಟ್ ಗೀತಾ ಸಾಹಿತ್ಯ, ಸದಾ ಬಾಳು ನೃತ್ಯ, ಮಾಸ್ ಮಾದ ಸಾಹಸ, ದೇವಿ ಪ್ರಕಾಷ್ ಕಲಾ ನಿರ್ದೇಶನ ಜವಾಬ್ದಾರಿ ಹೊತ್ತಿದ್ದಾರೆ. ಈ ಚಿತ್ರದ ಕಥಾ ನಾಯಕ ಆರ್ಯನ್ ಸಿನಿಮಾದಲ್ಲಿ ಕಿರು ತೆರೆ ನಟನಾಗಿದ್ದರೂ ಶಂಕರ್ ನಾಗ್ ಅಭಿಮಾನಿಯಾಗಿರುತ್ತಾರಂತೆ. ಇವರ ಅಭಿಮಾನಿ ಚಿತ್ರದ ಕಥಾ ನಾಯಕಿ ಅದ್ವಿತೀ ಶೆಟ್ಟಿ. ಸಮೀಕ್ಷ, ಪ್ರಸನ್ನ ಶೆಟ್ಟಿ, ವಿಜಯ ಕಾಶಿ, ರವಿ ಭಟ್, ಮಂಡ್ಯ ರಮೇಶ್, ನವೀನ್ ಡಿ ಪಾಡೇಳ್, ರಘು ಪಂದೆಶ್ವರ್, ವಿಟ್ಲ ಮುಂಗೆಶ್, ಸಂಗೀತ ಭ, ವಿಜಯಲಕ್ಷ್ಮಿ ಉಪಾಧ್ಯ ಹಾಗೂ ಇತರರು ತಾರಾಗಣದಲ್ಲಿದ್ದಾರೆ.

This Article Has 1 Comment
  1. Pingback: azure dev ops

Leave a Reply

Your email address will not be published. Required fields are marked *

Translate »
error: Content is protected !!