‘ದಚ್ಚು ದೀಪು’ ಚಿತ್ರದ ಮುಹೂರ್ತ

ಚಿತ್ರದ ಟೈಟಲ್ ಗಳನ್ನ ವಿಭಿನ್ನವಾಗಿ ಹೇಳುವ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಯುವಪಡೆಗಳು ಈಗ ಸ್ಟಾ ರ್‍ಗಳ ನಟರ ಅಡ್ಡ ಹೆಸರು ಚಿತ್ರದ ಶೀರ್ಷಿಕೆಯಾಗಿ ಬಳಸುತ್ತಿವೆ ಆ ಚಿತ್ರವೇ ದಚ್ಚು ದೀಪು. ಈ ಚಿತ್ರದ ಮುಹೂರ್ತ ಸಮಾರಂಭ ಕಂಠೀರವ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನೆರವೇರಿತು. ನವರಸ ನಾಯಕ ಜಗ್ಗೇಶ್ ಹಾಗೂ ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್ ಸೇರಿದಂತೆ ಚಿತ್ರೋದ್ಯಮದ ಹಲವಾರು ಗಣ್ಯರು ಆಗಮಿಸಿ ತಂಡಕ್ಕೆ ಶುಭವನ್ನು ಕೋರಿದ್ದರು.

ಚಂದನವನದಲ್ಲಿ ಸೂಪರ್ ಸ್ಟಾರ್ ಗಳಾದ ದರ್ಶನ್ ರನ್ನ ದಚ್ಚು ಅಂತಲೂ, ಸುದೀಪ್ ‍ರನ್ನು ದೀಪು ಅಂತ ಕುಟುಂಬದವರು,ಗೆಳಯರು ಪ್ರೀತಿಯಿಂದ ಕರೆಯುತ್ತಾರೆ. ಇದನ್ನೆ ಕ್ಯಾಚ್ ಮಾಡಿಕೊಂಡ ರಂಜೀತ್‍ತಿಗಡಿ ‘ದಚ್ಚು ದೀಪು’ ಚಿತ್ರಕ್ಕೆ ಕತೆ ಬರೆದು ಮೊದಲಬಾರಿ ನಿರ್ದೇಶನದ ಚುಕ್ಕಾಣಿ ಹಿಡಿಯುತ್ತಿದ್ದಾರೆ. ಹಾಗಂತ ಇದು ಅವರ ಕತೆಯಲ್ಲ ಎಂಬುದು ನಿಮ್ಮ ಗಮನಕ್ಕೆ ತರಲಾಗಿದೆ. ಹಲವಾರು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಯುವ ನಿರ್ದೇಶಕರು ವಿಭಿನ್ನ ಕಥೆಯನ್ನ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ.

ಈ ಚಿತ್ರದಲ್ಲಿ ಇಬ್ಬರು ಗೆಳೆಯರಾಗಿ ಸಿದ್ದಾರ್ಥ್ , ಆನಂದ ಕಾಣಿಸಿಕೊಳ್ಳುತ್ತಿದ್ದು ಇವರಿಬ್ಬರು ರೀಲ್ ಹಾಗೂ ರಿಯಲ್ ನಲ್ಲೂ ದರ್ಶನ್ , ಸುದೀಪ್ ಅಭಿಮಾನಿಯಾಗಿದ್ದಾರೆ. ಹಳ್ಳಿಯಲ್ಲಿ ಕಳ್ಳತನ ಘಟನೆ ನಡೆಯುತ್ತದೆ. ಹಿರಿಯರಿಂದ ತಪ್ಪಿಸಿಕೊಂಡು ಪಟ್ಟಣಕ್ಕೆ ಬಂದು ಬದುಕು ನಡೆಸಲು ಸ್ಟಾರ್ ನಟರ ಚಿತ್ರಗಳ ಪೋಸ್ಟರ್ ಅಂಟಿಸುತ್ತಾರೆ. ಒಂದು ಹಂತದಲ್ಲಿ ಇಬ್ಬರಲ್ಲೂ ಮನಸ್ತಾಪ ಬರುತ್ತದೆ. ಮುಂದೆ ಇವರಿಬ್ಬರ ದಿಕ್ಕು ಎತ್ತ ಕಡೆ ಸಾಗುತ್ತಿದೆ ಎಂಬುದನ್ನು ತೆರೆಯ ಮೇಲೆ ನೋಡಬೇಕಿದೆ. ಹಾಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು , ಎನ್‍.ಜಿ.ಓ ನಡೆಸುವ ಪಾತ್ರದಲ್ಲಿ ನಿಶ್ಕಲ ಅಭಿನಯಿಸುತ್ತಿದ್ದು ಇದು ಅವರ ನಾಲ್ಕನೇ ಚಿತ್ರವಾಗಿದೆ.

ಅನಾಥೆಯಾಗಿದ್ದರಿಂದ ಇಂತಹವರಿಗೆ ಸಹಾಯ ಮಾಡುವ ಪಾತ್ರದಲ್ಲಿ ಅರ್ಚನಾಸಿಂಗ್ ಇನ್ಸೆಪೆಕ್ಟರ್ ಪುತ್ರಿಯಾಗಿ ಕಾಣಿಸಿಕೊಳ್ಳುತಿದ್ದಾರೆ. ಸಂಗೀತ ಅಭಿಮನ್‍ರಾಯ್, ನೃತ್ಯ ತ್ರಿಭುವನ್, ಸಾಹಸ ಡಿಫರೆಂಟ್‍ಡ್ಯಾನಿ, ಚಿತ್ರಕತೆಯಲ್ಲಿ ಸಲಹೆ ನೀಡುತ್ತಿರುವ ಸಿದ್ದಾರ್ಥ ಛಾಯಾಗ್ರಹಣ ನಿರ್ವಹಿಸುತ್ತಿದ್ದಾರೆ. ಸಕಲೇಶಪುರ, ಕೇರಳ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

This Article Has 1 Comment
  1. Pingback: idn live

Leave a Reply

Your email address will not be published. Required fields are marked *

Translate »
error: Content is protected !!