ತೆರೆಗೆ ಸಿದ್ದ ಪಾದರಸ

ತೆರೆಗೆ ಸಿದ್ದ ಪಾದರಸ

‘ಪಾದರಸ’ ಚಿತ್ರವು ತೆರೆಗೆ ಬರುತ್ತಿರುವ ಕಾರಣ ಬಿಡುಗಡೆಪೂರ್ವ ಪತ್ರಿಕಾಗೋಷ್ಟಿಯಲ್ಲಿ ತಂಡವು ಮಾದ್ಯಮದ ಎದುರು ಹಾಜರಾಗಿತ್ತು. ಸರದಿಯಂತೆ ಮೈಕ್ ನಾಯಕ ಸಂಚಾರಿವಿಜಯ್ ಕೈ ಸೇರಿತು. ಮೂರು ವರ್ಷದ ಶ್ರಮ ಫಲ ನೀಡಿದೆ. ಸದ್ಯ ಯುವಜನತೆಯು ಎರಡರ್ಥದ ಸಂಭಾಷಣೆಗಳನ್ನು ಇಷ್ಟಪಡುವ ಕಾರಣ ಕೆಲವು ಡೈಲಾಗ್‍ಗಳು ಇರಲಿದೆ. ಕತೆಯಲ್ಲಿ ಸೆಂಟಿಮೆಂಟ್, ಹಾಸ್ಯ, ತುಂಟತನ, ಪೋಲಿತನ ಇರಲಿದ್ದು, ಎ.ಟಿ.ರವೀಶ್ ಅವರ ಹಾಡುಗಳು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಎಲ್ಲರಲ್ಲೂ ಕೆಟ್ಟದ್ದು, ಒಳ್ಳೆಯ ಗುಣಗಳು ಇರುತ್ತದೆ. ಬೆಳೆಯುವ ಮಕ್ಕಳು ಸಮಾಜಕ್ಕೆ ಮಾರಕವಾಗ್ತಾರಾ, ಪೂರಕವಾಗಿರುತ್ತರಾ ಎಂಬುದನ್ನು ಹೇಳಲಾಗಿದೆ.

 

ಹತ್ತಿರವಿದ್ದವರು ಮೋಸಮಾಡ್ತಾರೆ. ಯಾರಿಗೆ ಬೇಕಾದರೂ ಅನ್ಯಾಯ ಮಾಡಬಹುದು. ನಮ್ಮಮನಸ್ಸಾಕ್ಷಿಗೆ ಮೋಸ ಮಾಡಲು,ಸುಳ್ಳು ಹೇಳಲು ಆಗುವುದಿಲ್ಲ. ಅದು ಕಾಡುತ್ತೆ. ಪೋಸ್ಟರ್‍ದಲ್ಲಿ ಇಬ್ಬರು ನಾಯಕಿಯರು ಇದ್ದರೂ, ಸಿನಿಮಾದಲ್ಲಿ ಅಷ್ಟ ನಾಯಕಿಯರು ಇದ್ದಾರೆಂದು ಕುತೂಹಲ ಕಾಯ್ದಿರಿಸಿದರು. ನಾಯಕನ ಗುಣಕ್ಕೆ ಅನುಗುಣವಾಗಿ ಡಬ್ದಲ್ ಮೀನಿಂಗ್ ಅಗತ್ಯವಾಗಿದೆ ಎಂದು ಸಮರ್ಥಿಸಿಕೊಂಡರು ನಿರ್ದೇಶಕ ಹೃಷಿಕೇಶ್‍ಜಂಬಗಿ.

ಸಂಚಾರಿವಿಜಯ್‍ರನ್ನು ಪ್ರಾರಂಭದಲ್ಲಿ ಬೈದುಕೊಳ್ಳುತ್ತಾರೆ, ವಿರಾಮದ ನಂತರ ಅವರ ಮನುಷತ್ವಕ್ಕೆ ಬೆಲೆ ಕೊಡುತ್ತಾರೆ. ನವರಸಗಳು ತುಂಬಿರುವ ಪಾದರಸವೆಂದು ನಿರ್ಮಾಪಕರಲ್ಲಿ ಒಬ್ಬರಾದ ಕೃಷ್ಣರೇವುಕರ್ ಮಾತಾಗಿತ್ತು. ಶ್ರೀಮಂತ ಹುಡುಗಿಯಾಗಿ ಸಂಸ್ಕ್ರತಿಗೆ ಬೆಲೆಕೊಡುವ ಪಾತ್ರದಲ್ಲಿ ನಾಯಕಿ ವೈಷ್ಣವಿಮೆನನ್, ಉಪನಾಯಕಿಯಾಗಿ ಮನಸ್ವಿನಿ ಪಾತ್ರದ ಪರಿಚಯ ಮಾಡಿಕೊಂಡರು. ತಾರಬಳಗದಲ್ಲಿ ವಿಜಯ್‍ಚೆಂಡೂರ್, ನಿರಂಜನ್‍ದೇಶಪಾಂಡೆ, ಶಿಲ್ಪಗೌಡ ನಟನೆ ಇದೆ. ಇಬ್ಬರು ಅನಾಥ ಹುಡುಗರು ಯಾರ ಪ್ರೀತಿ, ಹಂಗು ಇಲ್ಲದೆ ಬೆಳೆಯುತ್ತಾ ತಮ್ಮ ದಾರಿಯನ್ನು ಹೇಗೆ ರೂಪಿಸಿಕೊಳ್ಳುತ್ತಾರೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ಟೈಟಲ್ ಕಾರ್ಡ್‍ನಿಂದ ನೋಡಿದರೆ ಮಾತ್ರ ಸಿನಿಮಾ ಅರ್ಥವಾಗುತ್ತದೆ. ತಡವಾಗಿ ಬಂದರೂ ಕತೆಯ ಬಗ್ಗೆ ಗೊಂದಲವಾಗವುದುಂಟು ಎಂದು ತಂಡವು ಹೇಳಿಕೊಂಡಿದೆ. ಸಿನಮಾಮೋಹಿಗಳು ಸೇರಿಕೊಂಡು ಆರ್ಟ್ ಅಂಡ್ ಸೋಲ್ ಮೀಡಿಯಾ ಸರ್ವಿಸಸ್ ಮುಖಾಂತರ ನಿರ್ಮಾಣ ಮಾಡಿರುವ ಚಿತ್ರವು ಆಗಸ್ಟ್ 10ರಂದು ಸುಮಾರು 100 ಕೇಂದ್ರದಲ್ಲಿ ಜಯಣ್ಣ ಕಂಬೈನ್ಸ್ ಮುಖಾಂತರ ಬಿಡುಗಡೆಯಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!