ತೆರೆಗೆ ಬರಲು ರೆಡಿಯಾದ ‘ಮಧುಬಾಲ ಮತ್ತು ದಿಲೀಪ್ ಕುಮಾರ್’ ಲವ್ ಕಹಾನಿ!
ಮಧುಬಾಲ ಅವರ ಸಹೋದರಿ ಮಧುರ್ ಬ್ರಿಜಿ ಭೂಷಣ್, ತನ್ನ ಸಹೋದರಿಯ ಜೀವನಕತೆಯನ್ನು ಸಿನಿಮಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ 2019 ರಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದೆ. ಚಿತ್ರದಲ್ಲಿ ಮಧುಬಾಲ ಹಾಗೂ ದಿಲೀಪ್ ಲವ್ ಸ್ಟೋರಿಯೂ ಇರಲಿದೆ.ಈ ಕುರಿತಂತೆ ಮಾತನಾಡಿರುವ ಮಧುರ್ ಬ್ರಿಜಿ, ನನ್ನ ಸಹೋದರಿಯ ಜೀವನದ ಪ್ರತಿ ವಿಚಾರವನ್ನು ನಾನು ಬಹಿರಂಗಪಡಿಸುತ್ತೇನೆ. ದಿಲೀಪ್ ಕುಮಾರ್ ಜೊತೆಗಿನ ಪ್ರೀತಿ, ಕಿಶೋರ್ ಕುಮಾರ್ ಜೊತೆಗಿನ ವೈವಾಹಿಕ ಜೀವನ ಎಲ್ಲವನ್ನೂ ಚಿತ್ರದಲ್ಲಿ ತೋರಿಸಲಾಗುತ್ತದೆ ಎಂದಿದ್ದಾರೆ.
Pingback: ipm3 download