ಡಿಸೆಂಬರ್ 6 ಕ್ಕೆ 19 Age is ನಾನ್ಸೆನ್ಸ್ ತೆರೆಗೆ

ಸುರೇಶ್ ಎಂ ಗಿಣಿ ನಿರ್ದೇಶನದ 19 ಏಜ್ ಈಸ್ ನಾನ್ಸೆನ್ಸ್ ಚಿತ್ರವೀಗ ಸೆನ್ಸಾರ್ ಮುಗಿಸಿಕೊಂಡಿದೆ. ಯುಎ ಸರ್ಟಿಫಿಕೇಟ್ ಕೂಡಾ ಸಿಕ್ಕಿದೆ. ಒಂದಿಷ್ಟು ನಿರೀಕ್ಷೆ ಹುಟ್ಟು ಹಾಕಿದ ಸಿನಿಮಾ 19 ಏಜ್ ಈಸ್ ನಾನ್‌ಸೆನ್ಸ್, ಹೊಸಬರ ವಿಭಿನ್ನ ಪ್ರಯತ್ನದಲ್ಲಿ ಮೂಡಿ ಬಂದಿರುವ ಈ ಸಿನಿಮಾ ಹದಿಹರೆಯದ ಯುವ ಜೋಡಿಗಳ ಮನಸ್ಸು ಸೆಳೆಯಲು ರೆಡಿಯಾಗಿದೆ.

ಶೀರ್ಷಿಕೆಯೇ ಭಿನ್ನ ಎನ್ನುವಂತೆ ಸಿನಿಮಾದ ಟ್ರೈಲರ್ ಇದೀಗಅಭಿಮಾನಿಗಳಲ್ಲಿ ಮೆಚ್ಚುಗೆ ಪಡೆದುಕೊಂಡಿದೆ. ಈ ಸಿನಿಮಾದ ಬಗ್ಗೆ ಪ್ರೇಕ್ಷಕರಲ್ಲೂ ಭರವಸೆ ಮನೆ ಮಾಡಿದೆ. ಪ್ರೇಮಿಗಳ ಸುತ್ತ ನಡೆಯುವ ಪ್ರೇಮ ಕಥೆಯನ್ನು ನಿರ್ದೇಶಕರು  ಹೆಣದಿದ್ದಾರೆ. ಇದೇ ಜಾಡಿನಲ್ಲಿರೋ ಚಿತ್ರ 19 ಏಜ್ ಈಸ್ ನಾನ್‌ಸೆನ್ಸ್. ಲೋಕೇಶ್ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಸಿನಿಮಾ ಕಳೆದ ಕೆಲ ದಿನಗಳಿಂದ ಸುದ್ದಿಯಲ್ಲಿದೆ.

ಡಿಸೆಂಬರ್ 6ಕ್ಕೆ ಬಿಡುಗಡೆಗೆ ಸಜ್ಜಾಗಿರುಈ ಹತ್ತೊಂಭತ್ತರ ಹರೆಯದ ತಾಜಾ ಕಥೆಗೀಗ ಸೆನ್ಸಾರ್ ಅಧಿಕಾರಿಗಳೇ ಮನಸೋತು ಮನಸಾರೆ ಮೆಚ್ಚಿಕೊಂಡಿದ್ದಾರೆ. ಈ ಸಂಗತಿ ಹೊಸಬರ ತಂಡಕ್ಕೆ ಮತ್ತಷ್ಟು ಭರವಸೆ ತುಂಬಿದೆ. ಅಂದಹಾಗೆ, ಈ ಸಿನಿಮಾ ಹತ್ತೊಂಭತ್ತರ ಹರೆಯದ ಸುತ್ತಾ ಘಟಿಸುವ ರೋಚಕ ಕಥಾ ಹಂದರವನ್ನೊಳಗೊಂಡಿದೆ.

ನಿರ್ಮಾಪಕ ಲೋಕೇಶ್ ಪುತ್ರ ಮನುಷ್ ನಾಯಕನಾಗಿ ನಟಿಸಿದ್ದಾರೆ. ಮೊದಲ ವರ್ಷದ ಬಿ.ಕಾಂ., ಪದವಿ ವ್ಯಾಸಂಗ ಮಾಡುತ್ತಿರುವ ಮನುಷ್ ನಟನೆ ಸೇರಿದಂತೆ ಎಲ್ಲದರಲ್ಲಿಯೂ ತರಬೇತಿ ಪಡೆದುಕೊಂಡೇ ನಾಯಕನಾಗಿ ಅಖಾಡಕ್ಕಿಳಿದಿದ್ದಾರೆ. ಡಿಸೆಂಬರ್ ತಿಂಗಳ ಮೊದಲ ವಾರದಿಂದಲೇ ಹದಿಹರೆಯದ ಪ್ರೇಮಕಥೆಯ ಸಂಪೂರ್ಣ ಚಿತ್ರಣ ನಿಮ್ಮನ್ನು ಆಕರ್ಷಣೆ ಮಾಡಲಿದೆ.

This Article Has 1 Comment
  1. Pingback: Segismundo Bermejo y Merelo

Leave a Reply

Your email address will not be published. Required fields are marked *

Translate »
error: Content is protected !!