ಚಂದನ್ ಶೆಟ್ಟಿ ಧ್ವನಿಯಲ್ಲಿ ಅನುಕ್ತ ಚಿತ್ರದ ಪ್ರಮೋಷನಲ್‌ ಹಾಡು

ಹರೀಶ್ ಬಂಗೇರ ಅವರು ನಿರ್ಮಿಸಿರುವ ‘ಅನುಕ್ತ‘ ಚಿತ್ರಕ್ಕೆ ಗಾಯಕ ಚಂದನ್ ಶೆಟ್ಟಿ ‘ಮಗ ಬಾರೊ‘ ಎಂಬ ಪ್ರಮೋಷನಲ್ ಸಾಂಗ್ ಹಾಡಿದ್ದಾರೆ.

ಕೀರ್ತನ್ ಭಂಡಾರಿ ರಚಿಸಿದ್ದು, ನೊಬಿನ್ ಪಾಲ್ ಸಂಗೀತ ನೀಡಿದ್ದಾರೆ. ಪ್ರಮೋಷನಲ್ ಸಾಂಗ್ ನ್ನು ಯು ಟ್ಯೂಬ್‌ನಲ್ಲಿ ಅಧಿಕ ಸಂಖ್ಯೆಯಲ್ಲಿ ವೀಕ್ಷಿಸಿದ್ದಾರೆ. ಅಶ್ವತ್ ಸ್ಯಾಮುಯಲ್ ಚಿತ್ರಕಥೆ, ನಿರ್ದೇಶನದ ಚಿತ್ರಕ್ಕೆ ಮನೋಹರ್ ಜೋಶಿ ಛಾಯಾಗ್ರಹಣ, ಎನ್.ಎಂ.ವಿಶ್ವ ಸಂಕಲನ, ಚಿತ್ರಕಥೆಯನ್ನು ಸಂತೋಷ್ ಕುಮಾರ್ ಹಾಗೂ ಕಾರ್ತಿಕ್ ಅತ್ತಾವರ್ ಬರೆದಿದ್ದಾರೆ.

ನವೀನ್ ಶರ್ಮ ಹಾಗೂ ಕಿರಣ್ ಶೆಟ್ಟಿ ಸಂಭಾಷಣೆ ಬರೆಯುವುದರೊಂದಿಗೆ ಸಹ ನಿರ್ದೇಶನ ಮಾಡಿದ್ದಾರೆ. ಕಾರ್ತಿಕ್ ಅತ್ತಾವರ್, ಸಂಗೀತಾ ಭಟ್ ಸಂಪತ್‌ರಾಜ್, ಅನುಪ್ರಭಾಕರ್ ಮುಖರ್ಜಿ, ಕೆ.ಎಸ್. ಶ್ರೀಧರ್, ಉಷಾ ಭಂಡಾರಿ, ಅನಿಲ್ ನೀನಾಸಂ, ಚಿದಾನಂದ ಪೂಜಾರಿ, ರಮೇಶ್ ರೈ, ಸ್ಟಾನಿ ಹಿಲ್ಟ್ರೀನ್, ಲಕ್ಷ್ಮೀ ಸಿದ್ದಯ್ಯ, ರೋಷನ್ ಶೆಟ್ಟಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

This Article Has 1 Comment
  1. Pingback: Digital Transformation Services

Leave a Reply

Your email address will not be published. Required fields are marked *

Translate »
error: Content is protected !!