“ಝೂ” ಮೂಲಕ ಬರುತ್ತಿದ್ದಾರೆ ಡಿ ಬಾಸ್

ನಿರ್ದೇಶಕ ಗುರು ದೇಶಪಾಂಡೆ ಅವರು ಡಿ ಬಾಸ್ ದರ್ಶನ್ ಹೀರೋ ಆಗಿರುವ ಹೊಸ ಚಿತ್ರ ” ಝೂ” ಚಿತ್ರವನ್ನು ಘೋಷಣೆ ಮಾಡಿದ್ದಾರೆ.

ಚಿತ್ರಕ್ಕೆ ಝೂ: ಕೇರ್ ಆಫ್ ‘ಡಿ’ ಬಾಸ್’ ಎಂದು ಸಬ್ ಟೈಟಲ್ ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ದರ್ಶನ್ ಅವರ ಭಾವಚಿತ್ರ ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ ಬಾಲಕನೊಬ್ಬ ನಟ ದರ್ಶನ್ ಅವರ ಅಭಿಮಾನಿ ಆಗಿ ಕಾಣಿಸಿಕೊಂಡಿದ್ದಾನೆ. ದರ್ಶನ್ ಅವರ ಪ್ರಾಣಿ ಪ್ರೀತಿಯಿಂದ ಕೂಡಿದ ಅಭಿಮಾನಿಯ ಕಥೆಯನ್ನು ಚಿತ್ರ ಹೊಂದಿದೆ.

ಕಥೆ, ನಿರ್ಮಾಣದ ಜೊತೆಗೆ ಚಿತ್ರದಲ್ಲಿ ಕ್ರಿಯೇಟಿವ್ ಹೆಡ್ ಆಗಿ ಗುರುದೇಶ ಪಾಂಡೆ ಜವಾಬ್ದಾರಿ ಹೊತ್ತಿದ್ದಾರೆ. ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನ, ಅಭಿಲಾಷ್ ಕಲಾತಿ ಅವರ ಛಾಯಾಗ್ರಹಣ ಚಿತ್ರಕ್ಕೆ ಇದೆ.
ದರ್ಶನ್ – ಇಂದ್ರಜಿತ್ ನಡುವಣ ವಾಕ್ಸಮರದ ಸಂದರ್ಭದಲ್ಲಿ ಗುರು ದೇಶಪಾಂಡೆ ಅವರು ದರ್ಶನ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದರು. ಈಗ ದರ್ಶನ್ ಹೀರೋ ಆಗಿರುವ ಹೊಸ ಚಿತ್ರ ಘೋಷಣೆ ಮಾಡಿರುವುದು ಅಭಿಮಾನಿಗಳಿಗೆ ಹರ್ಷ ಉಂಟು ಮಾಡಿದೆ.

ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರ ಬಂದಿಲ್ಲ. ಮೃಗಾಲಯದ ಪ್ರಾಣಿಗಳ ಬಗ್ಗೆ ಹೆಚ್ಚಿನ ಒಲವು ಹೊಂದಿರುವ ದರ್ಶನ್ ಲಾಕ್ ಡೌನ್ ವೇಳೆ ಪ್ರಾಣಿ, ಪಕ್ಷಿಗಳ ದತ್ತಿಗೆ ಕರೆ ನೀಡಿದ್ದರು. ಈ ಅಂಶ ಚಿತ್ರದಲ್ಲಿ ಮೂಡಿ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!