ಜೀ ಕನ್ನಡ ಕರ್ನಾಟಕದಲ್ಲಿ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿದೆ. “ಬಯಸಿದ ಬಾಗಿಲು ತೆಗೆಯೋಣ” ಎಂಬ ಟ್ಯಾಗ್ ಲೈನ್ ಮೂಲಕ ವಿಶ್ವದಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಿದ ಕುಟುಂಬದ ಸಮಗ್ರ ಮನರಂಜನೆಯ ಕನ್ನಡ ವಾಹಿನಿಯಾಗಿದೆ.
ಕನ್ನಡದ ಮುಂಚೂಣಿಯ ಮನರಂಜನೆಯ ವಾಹಿನಿ ಜೀ಼ ಕನ್ನಡದಲ್ಲಿ ಜನಪ್ರಿಯ ಧಾರಾವಾಹಿಗಳು ಜೂನ್ 1ರಿಂದ ಮತ್ತೆ ಪ್ರಾರಂಭವಾಗಲಿವೆ.
ರಾಜ್ಯ ಸರ್ಕಾರವು ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡಿಕೊಂಡು ಧಾರಾವಾಹಿಗಳ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದರಿಂದ ಧಾರಾವಾಹಿಗಳ ಚಿತ್ರೀಕರಣ ಮತ್ತೆ ಪ್ರಾರಂಭಗೊಂಡಿದ್ದು ಜೂನ್ 1ರಿಂದ ವೀಕ್ಷಕರು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ವೀಕ್ಷಿಸಬಹುದಾಗಿದೆ.
ಜೂನ್ 1ರಿಂದ ಪ್ರಸಾರವಾಗಲಿರುವ ಧಾರಾವಾಹಿಗಳಲ್ಲಿ ಕೆಲವು ಬದಲಾವಣೆಗಳಾಗಿವೆ. ರಾಧಾ ಕಲ್ಯಾಣ ಮತ್ತು ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಗಳ ಪ್ರಸಾರ ಇರುವುದಿಲ್ಲ. ಉಳಿದ ಧಾರಾವಾಹಿಗಳ ಪ್ರಸಾರ
# ಸಮಯ ಹೀಗಿದೆ:
ಸಂಜೆ 6.30ಕ್ಕೆ ಮಾಲ್ಗುಡಿ ಡೇಸ್, 7.00 ಗಂಟೆಗೆ ಕಮಲಿ, ಪಾರು ರಾತ್ರಿ 7.30ಕ್ಕೆ, ರಾತ್ರಿ 8.00ಕ್ಕೆ ಗಟ್ಟಿಮೇಳ, 8.30 ಜೊತೆ ಜೊತೆಯಲಿ, ರಾತ್ರಿ 9.00ಕ್ಕೆ ನಾಗಿಣಿ-2, ರಾತ್ರಿ 9.30ಕ್ಕೆ ಯಾರೇ ನೀ ಮೋಹಿನಿ ಹಾಗೂ ರಾತ್ರಿ 10.00 ಗಂಟೆಗೆ ಬ್ರಹ್ಮಗಂಟು ಧಾರಾವಾಹಿಗಳು ಪ್ರಸಾರವಾಗಲಿವೆ.
ಲಾಕ್ ಡೌನ್ ಏಕತಾನತೆಯಿಂದ ಬೇಸರಗೊಂಡಿದ್ದ ವೀಕ್ಷಕರಿಗೆ ಅವರ ನೆಚ್ಚಿನ ಧಾರಾವಾಹಿಗಳ ಮರು ಪ್ರಾರಂಭದೊಂದಿಗೆ ಜೀ಼ ಕನ್ನಡ ಮನರಂಜನೆಯ ಮಹಾಪೂರಕ್ಕೆ ಚಾಲನೆ ನೀಡಿದೆ.
Pingback: internet